ಹೆಲಿಕಾಪ್ಟರ್ ಮೂಲಕ ತೆರವು ಕಾರ್ಯಾಚರಣೆ ವಿಳಂಬಕ್ಕೆ ನಾನು ಹೊಣೆ: ಸಿಆರ್ಪಿಎಫ್ ಡಿಜಿ ಕುಲದೀಪ್ ಸಿಂಗ್
ಸಿಆರ್ಪಿಎಫ್ ಮುಖ್ಯಸ್ಥ ಕುಲ್ದೀಪ್ ಸಿಂಗ್ ಅವರು ಗಾಯಗೊಂಡಿರುವ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ತೆರವು ಮಾಡಲು ವಿಳಂಬವಾಗಿದ್ದಕ್ಕೆ ನಾನೇ ಜವಾಬ್ದಾರನಾಗಿರುತ್ತೇನೆ ಎಂದು ಗುರುವಾರ ಹೇಳಿದ್ದಾರೆ. ಆದರೆ ನಕ್ಸಲ್ ವಿರೋಧಿ...
Published: 17th March 2022 11:13 PM | Last Updated: 18th March 2022 01:24 PM | A+A A-

ಕುಲದೀಪ್ ಸಿಂಗ್
ನವದೆಹಲಿ: ಸಿಆರ್ಪಿಎಫ್ ಮುಖ್ಯಸ್ಥ ಕುಲ್ದೀಪ್ ಸಿಂಗ್ ಅವರು ಗಾಯಗೊಂಡಿರುವ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ತೆರವು ಮಾಡಲು ವಿಳಂಬವಾಗಿದ್ದಕ್ಕೆ ನಾನೇ ಜವಾಬ್ದಾರನಾಗಿರುತ್ತೇನೆ ಎಂದು ಗುರುವಾರ ಹೇಳಿದ್ದಾರೆ. ಆದರೆ ನಕ್ಸಲ್ ವಿರೋಧಿ ಹೋರಾಟದ ಡೊಮೇನ್ನಲ್ಲಿ ಅಂತಹ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲು ಕೆಲವೊಮ್ಮೆ "ಪ್ರಾಯೋಗಿಕ ತೊಂದರೆಗಳು" ಉಂಟಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಆರ್ಟಿಕಲ್ 370 ರದ್ದಾದ ಬಳಿಕ ಕಾಶ್ಮೀರದಲ್ಲಿ ಕಲ್ಲು ತೂರಾಟ ನಿಂತಿದೆ, ಆದರೆ...: ಸಿಆರ್ ಪಿಎಫ್ ಡಿಜಿ
ಬಿಹಾರದಲ್ಲಿ ಗಾಯಗೊಂಡಿರುವ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್ಪಿಎಫ್) ಅಧಿಕಾರಿಯನ್ನು ಹೆಲಿಕಾಪ್ಟರ್ ಮೂಲಕ ಸಾಗಿಸಲು ಏಳು ಗಂಟೆ ವಿಳಂಬವಾದ ಇತ್ತೀಚಿನ ಘಟನೆಯ ಕುರಿತು ಮಾತನಾಡಿದ ಅವರು, "ಹೆಲಿಕಾಪ್ಟರ್ಗೆ ಅಧಿಕಾರಿಯನ್ನು ಸ್ಥಳಾಂತರಿಸಲು ಅಥವಾ ತಕ್ಷಣ ಕಾರ್ಯಾಚರಣೆ ನಡೆಸಲು ಏಕೆ ಸಾಧ್ಯವಾಗಲಿಲ್ಲ ಎಂಬುದು ದೊಡ್ಡ ತಾಂತ್ರಿಕ ಸಮಸ್ಯೆಯಾಗಿದೆ" ಎಂದರು.
"ಈ ವಿಳಂಬಕ್ಕೆ ಯಾರು ಜವಾಬ್ದಾರರು ಎಂದು ನೀವು ಕೇಳಿದರೆ, ನಾನೇ ಜವಾಬ್ದಾರನಾಗಿರುತ್ತೇನೆ. ಸೈನ್ಯಕ್ಕೆ ಹೆಲಿಕಾಪ್ಟರ್ ಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಏಕೆಂದರೆ ನಮ್ಮ ಸೈನಿಕರನ್ನು ಕಾರ್ಯಾಚರಣೆಗೆ ಹೋಗಲು ನಾವೇ ಸೂಚಿಸುತ್ತೇವೆ. ಈ ವಿಳಂಬಕ್ಕೆ ಬೇರೆ ಯಾರನ್ನೂ ದೂಷಿಸುವುದಿಲ್ಲ" ಎಂದು ಸಿಂಗ್ ಹೇಳಿದ್ದಾರೆ.