''ದಿ ಕಾಶ್ಮೀರ್ ಫೈಲ್ಸ್'' ಸಿನಿಮಾದಲ್ಲಿ ಅನೇಕ ಸುಳ್ಳುಗಳ ಸರಮಾಲೆ- ಒಮರ್ ಅಬ್ದುಲ್ಲಾ
ದೇಶಾದ್ಯಂತ ಪರ ಹಾಗೂ ವಿರೋಧಗಳಿಗೆ ಕಾರಣವಾಗಿರುವ '' ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಕಾರ್ಯಾಧ್ಯಕ್ಷ ಮತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
Published: 18th March 2022 04:42 PM | Last Updated: 18th March 2022 05:20 PM | A+A A-

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಫೋಸ್ಟರ್ ಮತ್ತು ಒಮರ್ ಅಬ್ದುಲ್ಲಾ
ಜಮ್ಮು: ದೇಶಾದ್ಯಂತ ಪರ ಹಾಗೂ ವಿರೋಧಗಳಿಗೆ ಕಾರಣವಾಗಿರುವ '' ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಕಾರ್ಯಾಧ್ಯಕ್ಷ ಮತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ, 'ದಿ ಕಾಶ್ಮೀರ್ ಫೈಲ್ಸ್' ಸಾಕ್ಷ್ಯಚಿತ್ರವೇ ಅಥವಾ ಚಲನಚಿತ್ರವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದರು.
ಸಿನಿಮಾ ನೈಜತೆಯನ್ನು ಆಧರಿಸಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ, ಚಿತ್ರದಲ್ಲಿ ಹಲವು ಸುಳ್ಳುಗಳನ್ನು ಬಿಂಬಿಸಲಾಗಿದೆ ಎಂಬುದು ಸತ್ಯ. ಎನ್ ಸಿ ಸರ್ಕಾರ ಇತ್ತು ಎಂಬುದು ದೊಡ್ಡ ಸುಳ್ಳು. ಕಾಶ್ಮೀರಿ ಪಂಡಿತರು ತೊರೆದಾಗ 1990ರಲ್ಲಿ ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಇತ್ತು ಎಂದು ಒಮರ್ ಹೇಳಿದ್ದಾರೆ.
ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್: 1ನೇ ದಿನ ಕಲೆಕ್ಷನ್ ನೋಡಿ ಹೀನಾಯವಾಗಿ ಸೋಲುತ್ತೆ ಅಂದಿದ್ರು; ಆದರೆ 7ನೇ ದಿನಕ್ಕೆ 100 ಕೋಟಿ ರೂ. ಬಾಚಿದೆ
ಕಾಶ್ಮೀರಿ ಪಂಡಿತರು ಮಾತ್ರ ವಲಸೆ ಹೋಗಿಲ್ಲ ಅಥವಾ ಕೊಲ್ಲಲ್ಪಟ್ಟಿಲ್ಲ , ಮುಸ್ಲಿಂರು, ಸಿಖ್ಖರು ಕೂಡಾ ಕೊಲ್ಪಲ್ಪಟ್ಟರು. ಅವರು ಕೂಡಾ ಕಾಶ್ಮೀರದಿಂದ ವಲಸೆ ಹೋಗಬೇಕಾಯಿತು ಮತ್ತು ಇನ್ನೂ ಹಿಂತಿರುಗಿಲ್ಲ ಎಂದರು. ಕಾಶ್ಮೀರ ಪಂಡಿತರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಎನ್ ಸಿ ತನ್ನ ಪಾತ್ರವನ್ನು ವಹಿಸಲು ಪ್ರಯತ್ನಿಸುತ್ತಿದೆ ಮತ್ತು ಮುಂದುವರೆಸಿದೆ ಎಂದು ಅವರು ತಿಳಿಸಿದರು.