ಬಿಎಸ್ಎಫ್ ಶಿಬಿರದಲ್ಲಿ ಮೂವರು ಅಪ್ರಾಪ್ತ ಬಾಲಕರ ಸಾವು; ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ!
ಧಲೈ ಜಿಲ್ಲೆಯ ಜವಾಹರ್ನಗರದಲ್ಲಿರುವ 138 ಬೆಟಾಲಿಯನ್ ಬಿಎಸ್ ಎಫ್ನ ಶಿಬಿರದಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.
Published: 18th March 2022 08:08 PM | Last Updated: 18th March 2022 08:08 PM | A+A A-

ಪ್ರತ್ಯಕ್ಷ ದೃಶ್ಯ
ಧಲೈ: ಧಲೈ ಜಿಲ್ಲೆಯ ಜವಾಹರ್ನಗರದಲ್ಲಿರುವ 138 ಬೆಟಾಲಿಯನ್ ಬಿಎಸ್ ಎಫ್ನ ಶಿಬಿರದಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.
ಮೃತರನ್ನು ಅಶ್ಮಾನ್ ಕುಮಾರ್(13), ಪ್ರಬಲ್ ತಿವಾರಿ(12) ಮತ್ತು ಅಜಿತ್ ಜಗತಾಪ್(16) ಎಂದು ಗುರುತಿಸಲಾಗಿದ್ದು, ಅವರ ತಂದೆ ಪ್ರಸ್ತುತ ಬಿಎಸ್ ಎಫ್ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ, ವರದಿಯ ಪ್ರಕಾರ, ಬೆಳಿಗ್ಗೆ 11 ಗಂಟೆಗೆ ಶಿಬಿರದೊಳಗೆ ಘಟನೆ ಸಂಭವಿಸಿದೆ ಆದರೆ ಮೂರು ಗಂಟೆಗಳ ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಯ ಅಧಿಕಾರಿಗಳು ತಿಳಿಸುವವರೆಗೂ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿಲ್ಲ. ಘಟನೆಯ ಬಗ್ಗೆ ತಮಗೆ ತಿಳಿದಿಲ್ಲ, ಮೃತ ದೇಹಗಳ ಬಗ್ಗೆ ಆಸ್ಪತ್ರೆಯಿಂದ ಕರೆ ಬಂದಿದೆ ಮತ್ತು ತನಿಖೆ ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂವರು ಮಕ್ಕಳು ಸ್ನಾನ ಮಾಡಲು ಸಮೀಪದ ಹೊಳೆಗೆ ಹೋಗಿ ನದಿಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಮೃತಪಟ್ಟಿದ್ದಾರೆ. ಹೋಳಿ ಆಚರಣೆ ವೇಳೆ ಮಕ್ಕಳು ವಿಷಕಾರಿ ಅಥವಾ ಪ್ರತಿಕ್ರಿಯಾತ್ಮಕ ಪದಾರ್ಥಗಳನ್ನು ಸೇವಿಸಿರಬಹುದು ಎಂದು ಕೂಡ ಶಂಕಿಸಲಾಗಿದೆ.