ಉತ್ತರ ಪ್ರದೇಶ: ಚುನಾವಣೆಗೆ ಹಾಕಿದ್ದ ಹಣ ವಾಪಸ್ ಪಡೆಯಲು ಪತ್ನಿಯನ್ನೇ ಮಾರಿದ ಪತಿ!
'ದೊಡ್ಡ ಮೊತ್ತದ ಹಣ ನೀಡಿದರೂ ಟಿಕೆಟ್ ನಿರಾಕರಿಸಲಾಗಿದೆ' ಎಂದು ಆರೋಪಿಸಿದ ಉತ್ತರಪ್ರದೇಶದ ಸ್ಥಳೀಯ ಮುಖಂಡರೊಬ್ಬರ ಪತ್ನಿಯೊಬ್ಬರು ಚುನಾವಣೆಗಾಗಿ ಹಣ ಸಂಗ್ರಹಿಸಲು ಪತಿ ಆತನ ಸ್ನೇಹಿತರಿಗೆ ತನ್ನನ್ನು ಮಾರಿದ್ದಾನೆ ಎಂದು ಆರೋಪಿಸಿದ್ದಾರೆ.
Published: 18th March 2022 03:42 PM | Last Updated: 18th March 2022 05:15 PM | A+A A-

ಸಂಗ್ರಹ ಚಿತ್ರ
ಮುಜಾಫರ್‌ನಗರ: 'ದೊಡ್ಡ ಮೊತ್ತದ ಹಣ ನೀಡಿದರೂ ಟಿಕೆಟ್ ನಿರಾಕರಿಸಲಾಗಿದೆ' ಎಂದು ಆರೋಪಿಸಿದ ಉತ್ತರಪ್ರದೇಶದ ಸ್ಥಳೀಯ ಮುಖಂಡರೊಬ್ಬರ ಪತ್ನಿಯೊಬ್ಬರು ಚುನಾವಣೆಗಾಗಿ ಹಣ ಸಂಗ್ರಹಿಸಲು ಪತಿ ಆತನ ಸ್ನೇಹಿತರಿಗೆ ತನ್ನನ್ನು ಮಾರಿದ್ದಾನೆ ಎಂದು ಆರೋಪಿಸಿದ್ದಾರೆ.
ಉತ್ತರಪ್ರದೇಶದ ಪೊಲೀಸ್ ಠಾಣೆಯಲ್ಲಿ ತಮ್ಮ ಅಳಲು ತೋಡಿಕೊಂಡಿರುವ ಮಹಿಳೆ ತನ್ನ ಮನೆಯಲ್ಲೇ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದೂ ಆಕೆ ಆರೋಪಿಸಿದ್ದಾರೆ.
ಪತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ ಬಳಿಕ ಮಹಿಳೆಗೆ ಬೇರೆ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು. ಪೊಲೀಸರು ಇದೀಗ ಪತಿ ಮತ್ತು ಆತನ ಸ್ನೇಹಿತರು ಮತ್ತು ಸಂಬಂಧಿಕರ ಮೇಲೆ ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಐಪಿಸಿಯ ಇತರ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್ 10ರಂದು ಮತ ಎಣಿಕೆ ಮುಗಿದ ಗಂಟೆಗಳ ನಂತರ, ನನ್ನ ಗಂಡ ತನ್ನ ಸ್ನೇಹಿತನೊಬ್ಬನನ್ನು ಮನೆಗೆ ಕರೆದುಕೊಂಡು ಬಂದು ಆತನು ಕೊಟ್ಟ ಹಣಕ್ಕಾಗಿ ಅವನ ಜೊತೆ ಮಲಗುವಂತೆ ಪತಿ ಒತ್ತಾಯಿಸಿದ. ಇದಕ್ಕೆ ಒಪ್ಪದಿದ್ದಾಗ ನನಗೆ ಥಳಿಸಿದರು. ಈ ವಿಚಾರವನ್ನು ನನ್ನ ಗಂಡನ ಸಂಬಂಧಿಕರಿಗೆ ತಿಳಿಸಿದೆ ಇದಕ್ಕೆ ಅವರು ನನ್ನನ್ನು ನಿಂದಿಸಿದರು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ದೂರಿನ ಆಧಾರದ ಮೇಲೆ, ಪೊಲೀಸರು ಸೆಕ್ಷನ್ 376ಡಿ, 342, 452, 506ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಮಹಿಳೆ ತನ್ನ ಪತಿ ಹಾಗೂ ಇತರ ಮೂವರ ವಿರುದ್ಧ ದೂರು ನೀಡಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ತನ್ನ ಮೇಲೆ ಪತ್ನಿ ಮಾಡಿರುವ ಆರೋಪಗಳನ್ನು ಪತಿ ಅಲ್ಲಗಳೆದಿದ್ದಾನೆ.