ಚುನಾವಣೆ ಮೇಲೆ ಕಣ್ಣಿಟ್ಟು ಬಿಜೆಪಿ 'ದಿ ಕಾಶ್ಮೀರ್ ಫೈಲ್ಸ್ ಪ್ರಚಾರ'-ಸಂಜಯ್ ರಾವತ್
ಮುಂಬರುವ ಗುಜರಾತ್ ಮತ್ತು ರಾಜಸ್ಥಾನ್ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಭಾರತೀಯ ಜನತಾ ಪಾರ್ಟಿ '' ದಿ ಕಾಶ್ಮೀರ್ ಫೈಲ್ಸ್ '' ಚಿತ್ರದ ಪ್ರಚಾರದಲ್ಲಿ ತೊಡಗಿದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಭಾನುವಾರ ಆರೋಪಿಸಿದ್ದಾರೆ.
Published: 20th March 2022 02:07 PM | Last Updated: 20th March 2022 02:11 PM | A+A A-

ದಿ ಕಾಶ್ಮೀರ್ ಪಂಡಿತ್ ಚಿತ್ರತಂಡದೊಂದಿಗೆ ಅಮಿತ್ ಶಾ ಹಾಗೂ ಸಂಜಯ್ ರಾವತ್ ಅವರ ಸಾಂದರ್ಭಿಕ ಚಿತ್ರ
ಮುಂಬೈ: ಮುಂಬರುವ ಗುಜರಾತ್ ಮತ್ತು ರಾಜಸ್ಥಾನ್ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಭಾರತೀಯ ಜನತಾ ಪಾರ್ಟಿ '' ದಿ ಕಾಶ್ಮೀರ್ ಫೈಲ್ಸ್ '' ಚಿತ್ರದ ಪ್ರಚಾರದಲ್ಲಿ ತೊಡಗಿದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಭಾನುವಾರ ಆರೋಪಿಸಿದ್ದಾರೆ. ಅಲ್ಲದೇ, ಚಿತ್ರದಲ್ಲಿ ಹಲವಾರು ಕಠಿಣ ಸತ್ಯಗಳನ್ನು ಮರೆಮಾಚುವ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದ್ದಾರೆ.
ವಲಸೆ ಹೋದ ಕಾಶ್ಮೀರಿ ಪಂಡಿತರನ್ನು ಕಾಶ್ಮೀರಕ್ಕೆ ಮರಳಿ ಕರೆತರುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಸಂವಿಧಾನದ ವಿಧಿ 370 ರದ್ದುಗೊಂಡರೂ ಅದು ಸಾಧ್ಯವಾಗಿಲ್ಲ. ಇದರಲ್ಲಿ ಯಾರ ವಿಫಲತೆಯಾಗಿದೆ ಎಂಬುದನ್ನು ತಿಳಿಯಬೇಕಾಗಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ರಾವತ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಚಿತ್ರದ ಪ್ರಮುಖ ಪ್ರವರ್ತಕವಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿರುವ ಸಂಜಯ್ ರಾವತ್, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ಸಂಯೋಜಿಸುವ ಎನ್ ಡಿಎ ಭರವಸೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಬಗ್ಗೆ ಮಧ್ಯಪ್ರದೇಶ ಐಎಎಸ್ ಅಧಿಕಾರಿ ವಿವಾದಾತ್ಮಕ ಟ್ವೀಟ್; ಕ್ರಮಕ್ಕೆ ಬಿಜೆಪಿ ಆಗ್ರಹ
"ಕಾಶ್ಮೀರದಲ್ಲಿ ಹಿಂದೂ ಪಂಡಿತರ ಪಲಾಯನ, ಅವರ ಹತ್ಯೆಗಳು, ಅವರ ಮೇಲೆ ನಡೆದ ದೌರ್ಜನ್ಯಗಳು ಮತ್ತು ಅವರ ಕೋಪವು ಒಬ್ಬರ ಮನಸ್ಸನ್ನು ಕಲಕುವ ಕಥೆಯನ್ನು ಆಧರಿಸಿದೆ. ಆದರೆ, ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಈ ಕಥೆಯೊಂದಿಗೆ ಹಿಂದೂ-ಮುಸ್ಲಿಂರನ್ನು ಒಡೆಯುವ ಪ್ರಯತ್ನ ಮತ್ತಷ್ಟು ತೊಂದರೆ ಕೊಡುತ್ತದೆ ಎಂದು ಅವರು ಹೇಳಿದ್ದಾರೆ.
ಆ ಸಮಯದಲ್ಲಿ ಕಾಶ್ಮೀರ್ ಪಂಡಿತರಷ್ಟೇ ಹತ್ಯೆಯಾಗಿಲ್ಲ, ಮುಸ್ಲಿಂರು, ಸಿಖ್ಖರು ಕೂಡಾ ಹತ್ಯೆಯಾಗಿದ್ದಾರೆ. ಆಗಸ್ಟ್ 1989 ರಲ್ಲಿ ಕಾಶ್ಮೀರದಲ್ಲಿ ಮೊದಲ ರಾಜಕಾರಣಿಯ ಹತ್ಯೆ ನಡೆಯುತ್ತದೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮೊಹಮ್ಮದ್ ಯೂಸುಫ್ ಹಲ್ವಾಯ್ ಅವರ ಕೊಲೆಯಾಗುತ್ತದೆ. ಅದಕ್ಕೂ ಮೊದಲು, ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಮೇಲೆ ದಾಳಿ ನಡೆಸಲಾಯಿತು, ಇದರಲ್ಲಿ ಅಧಿಕಾರಿಯ ಅಂಗರಕ್ಷಕ ಕೊಲ್ಲಲ್ಪಟ್ಟರು ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.