ಭವಿಷ್ಯದ ಕೋವಿಡ್ ಅಲೆಗಳು ಭಾರತದಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇಲ್ಲ: ತಜ್ಞರು
ಆಗ್ನೇಯ ಏಷ್ಯಾ ಮತ್ತು ಯುರೋಪ್ನ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆ, ಲಸಿಕೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾದರೆ ಭವಿಷ್ಯದ ಯಾವುದೇ ಕೋವಿಡ್ ಅಲೆಗಳು ದೇಶದಲ್ಲಿ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಭಾರತದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Published: 20th March 2022 05:02 PM | Last Updated: 20th March 2022 05:02 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಆಗ್ನೇಯ ಏಷ್ಯಾ ಮತ್ತು ಯುರೋಪ್ನ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆ, ಲಸಿಕೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾದರೆ ಭವಿಷ್ಯದ ಯಾವುದೇ ಕೋವಿಡ್ ಅಲೆಗಳು ದೇಶದಲ್ಲಿ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಭಾರತದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೈನಂದಿನ ಕೋವಿಡ್ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕೆಲ ದಿನಗಳಿಂದ ಕಡಿಮೆ ಬರುತ್ತಿರುವುದರಿಂದ ಮಾಸ್ಕ್ ಆದೇಶವನ್ನು ಸಡಿಲಿಸುವುದನ್ನು ಸರ್ಕಾರ ಪರಿಗಣಿಸಬೇಕು ಎಂದು ತಜ್ಞರು ಹೇಳಿದರು. ಭಾರತದಲ್ಲಿ ಇದು 1,761 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು ಇದು ಸುಮಾರು 688 ದಿನಗಳಲ್ಲಿ ಅತ್ಯಂತ ಕಡಿಮೆ ಪ್ರಕರಣವಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 26,240ಕ್ಕೆ ಇಳಿಯಾಗಿದೆ.
SARS-CoV-2 ಒಂದು RNA ವೈರಸ್ ಮತ್ತು ರೂಪಾಂತರಗಳು ಸಂಭವಿಸುತ್ತವೆ ಎಂದು ವಯಸ್ಕರು ಮತ್ತು ಮಕ್ಕಳ ಕೋವಾಕ್ಸಿನ್ ಪ್ರಯೋಗಗಳ ಪ್ರಧಾನ ತನಿಖಾಧಿಕಾರಿ AIIMS ನ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಸಂಜಯ್ ರೈ ಹೇಳಿದ್ದಾರೆ.
ಈಗಾಗಲೇ 1,000ಕ್ಕೂ ಹೆಚ್ಚು ರೂಪಾಂತರಗಳು ಸಂಭವಿಸಿವೆ. ಆದರೂ ಕಾಳಜಿಯ ಐದು ರೂಪಾಂತರಗಳು ಮಾತ್ರ ಇವೆ. ಕಳೆದ ವರ್ಷ ಭಾರತವು ಅತ್ಯಂತ ವಿನಾಶಕಾರಿ ಎರಡನೇ ತರಂಗವನ್ನು ಎದುರಿಸಿತ್ತು. ಇದು ತುಂಬಾ ದುರದೃಷ್ಟಕರವಾಗಿದೆ. ಆದರೆ ಪ್ರಸ್ತುತ ಇದು ನಮ್ಮ ಪ್ರಮುಖ ಶಕ್ತಿಯಾಗಿದೆ ಏಕೆಂದರೆ ನೈಸರ್ಗಿಕ ಸೋಂಕು ಉತ್ತಮ ಮತ್ತು ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ. ಅಲ್ಲದೆ, ಹೆಚ್ಚಿನ ವ್ಯಾಕ್ಸಿನೇಷನ್ ವ್ಯಾಪ್ತಿಯು ಇದೆ. ಆದ್ದರಿಂದ, ಭವಿಷ್ಯದ ಯಾವುದೇ ತರಂಗದ ತೀವ್ರ ಪರಿಣಾಮ ಅಸಂಭವವಾಗಿದೆ ಎಂದು ರೈ ಹೇಳಿದರು.
ಭಾರತ ಸರ್ಕಾರವು ಮಾಸ್ಕ್ ಆದೇಶವನ್ನು ಸಡಿಲಿಸುವುದನ್ನು ಪರಿಗಣಿಸುವ ಸಮಯವಾಗಿದೆ ಎಂದು ಅವರು ಹೇಳಿದರು. ಹಿರಿಯ ನಾಗರಿಕರು ಮತ್ತು ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯದಲ್ಲಿರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು.
ಭವಿಷ್ಯದ ಯಾವುದೇ ರೂಪಾಂತರಿ ಹಾವಳಿಯನ್ನು ಮೇಲ್ವಿಚಾರಣೆ ಮಾಡಲು ಜೀನೋಮಿಕ್ ಸೀಕ್ವೆನ್ಸಿಂಗ್ ಸೇರಿದಂತೆ SARS-CoV-2 ಕಣ್ಗಾವಲನ್ನು ಸರ್ಕಾರ ಮುಂದುವರಿಸಬೇಕು ಎಂದು ರೈ ಒತ್ತಿ ಹೇಳಿದರು.