
ಹರ್ಭಜನ್ ಸಿಂಗ್
ಚಂಡೀಗಢ: ಪಂಜಾಬ್ನ ಆಮ್ ಆದ್ಮಿ ಪಕ್ಷವು ರಾಜ್ಯದಿಂದ ಐವರು ರಾಜ್ಯಸಭಾ ಸದಸ್ಯರನ್ನು ನಾಮನಿರ್ದೇಶನ ಮಾಡಿದೆ. ಆಪ್ ನಿಂದ ನಾಮನಿರ್ದೇಶನಗೊಂಡವರಲ್ಲಿ ಖ್ಯಾತ ಬೌಲರ್ ಹರ್ಭಜನ್ ಸಿಂಗ್ ಕೂಡಾ ಸೇರಿದ್ದಾರೆ ಎನ್ನುವುದು ವಿಶೇಷ.
ಇದನ್ನೂ ಓದಿ: ಗೋವಾ: ಇಂದು ಸಂಜೆ ನೂತನ ಮುಖ್ಯಮಂತ್ರಿ ಆಯ್ಕೆ, ಪ್ರಮೋದ್ ಸಾವಂತ್ ಬಹುತೇಕ ಖಚಿತ
ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಪ್ 92 ಸ್ಥಾನ ಗಳಿಸಿ ಜಯಭೇರಿ ಬಾರಿಸಿತ್ತು. ಪಂಜಾಬ್ನ ಏಳು ರಾಜ್ಯಸಭಾ ಸ್ಥಾನಗಳ ಪೈಕಿ ಐದು ಸ್ಥಾನಗಳಿಗೆ ಮೇ 31 ರಂದು ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಉತ್ತರಾಖಂಡ ಸಿಎಂ ಆಗಿ ಪುಷ್ಕರ್ ಸಿಂಗ್ ಧಮಿ ಮುಂದುವರಿಕೆ
ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ಡಾ. ಸಂದೀಪ್ ಪಟ್ನಾಯಕ್, ಶಾಸಕ ರಾಘವ್ ಚಡ್ಡಾ, ಪ್ರೊಫೆಸರ್ ಅಶೋಕ್ ಮಿತ್ತಲ್, ಕೃಷ್ಣ ಪ್ರಾಣ್ ಆಪ್ ನಿಂದ ನಾಮನಿರ್ದೇಶನಗೊಂಡವರು.
ಇದನ್ನೂ ಓದಿ: ಕಾಂಗ್ರೆಸ್ ಗೆ ಮತ್ತೊಂದು ಆಘಾತ: ಸಕ್ರಿಯ ರಾಜಕಾರಣಕ್ಕೆ ಹಿರಿಯ ನಾಯಕ ಗುಲಾಂ ನಬೀ ಆಜಾದ್ ಗುಡ್ ಬೈ!