ಮಣಿಪುರ ಆಡಳಿತ ಪಕ್ಷದ ಶಾಸಕಾಂಗ ಪಕ್ಷನಾಗಿ ಬಿರೇನ್ ಸಿಂಗ್ ಆಯ್ಕೆ: 2ನೇ ಅವಧಿಗೆ ಸಿಎಂ ಹುದ್ದೆ
ಮಣಿಪುರದ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಎನ್ ಬಿರೇನ್ ರಿಂಗ್ ಆಯ್ಕೆಯಾಗಿದ್ದಾರೆ.
Published: 21st March 2022 12:39 AM | Last Updated: 21st March 2022 12:39 AM | A+A A-

ಎನ್ ಬಿರೇನ್ ಸಿಂಗ್
ನವದೆಹಲಿ: ಮಣಿಪುರದ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಎನ್ ಬಿರೇನ್ ರಿಂಗ್ ಆಯ್ಕೆಯಾಗಿದ್ದಾರೆ.
2 ನೇ ಅವಧಿಗೆ ಬಿರೇನ್ ಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈಶಾನ್ಯ ರಾಜ್ಯಕ್ಕೆ ವೀಕ್ಷಕರೂ ಆಗಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಿರೇನ್ ಸಿಂಗ್ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
Congratulations to @NBirenSingh Ji on being elected as the leader of @BJP4Manipur Legislature Party.
— Kiren Rijiju (@KirenRijiju) March 20, 2022
Manipur will witness more progress as per the vision of hon'ble PM @narendramodi Ji and the aspirations of the people of Manipur. pic.twitter.com/BvMu9ceLWq
ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಮುಖ್ಯಮಂತ್ರಿ ಆಯ್ಕೆ ವಿಳಂಬವಾಗಿತ್ತು. ಈಗ ಬಿರೇನ್ ಸಿಂಗ್ ಅವರು ಸರ್ವಾನುಮತದಿಂದ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದಾರೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರೂ ಸಹ ವೀಕ್ಷಕರಾಗಿದ್ದರು. ಬಿರೇನ್ ಸಿಂಗ್ ಆಯ್ಕೆ ಬಳಿಕ ಕಿರಣ್ ರಿಜಿಜು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.