ದೇಶಕ್ಕೆ ಬೇಕಾಗಿರುವುದು ಡೆವಲಪ್ಮೆಂಟ್ ಫೈಲ್ಸ್ ಹೊರತು ಕಾಶ್ಮೀರ್ ಫೈಲ್ಸ್ ಅಲ್ಲ: ಕೇಂದ್ರದ ವಿರುದ್ಧ ಕೆಸಿಆರ್ ಗರಂ
ಇತ್ತೀಚೆಗಷ್ಟೇ ಬಿಡುಗಡೆಯಾದ ಕಾಶ್ಮೀರ ಫೈಲ್ಸ್ ಚಿತ್ರದ ಬಗ್ಗೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 21st March 2022 07:55 PM | Last Updated: 21st March 2022 07:55 PM | A+A A-

ಕೆಸಿಆರ್
ಹೈದರಾಬಾದ್: ಇತ್ತೀಚೆಗಷ್ಟೇ ಬಿಡುಗಡೆಯಾದ ಕಾಶ್ಮೀರ ಫೈಲ್ಸ್ ಚಿತ್ರದ ಬಗ್ಗೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಆರ್ಎಸ್ ಪಕ್ಷದ ಸಭೆಯಲ್ಲಿ ಕೆಸಿಆರ್ ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ. ದೇಶಕ್ಕೆ ಕಾಶ್ಮೀರದ ಫೈಲ್ಸ್ ಬೇಕಿಲ್ಲ ಅಭಿವೃದ್ಧಿ ಫೈಲ್ಸ್ ಬೇಕು. ದೇಶದ ಸಮಸ್ಯೆಗಳನ್ನು ಗಮನ ಕೊಡದೆ ಜನರನ್ನ ದಾರಿತಪ್ಪಿಸುವ ಉದ್ದೇಶದಿಂದ ಸಿನಿಮಾ ಬಿಡುಗಡೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಕಾಶ್ಮೀರ ಫೈಲ್ಸ್ ಚಿತ್ರದ ಕಡೆಗೆ ಗಮನಕೊಡುವುದನ್ನ ಬಿಟ್ಟು, ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳುವತ್ತ ಗಮನಹರಿಸಬೇಕು. ಕಾಶ್ಮೀರದಲ್ಲಿ ಹಿಂದೂ ಪಂಡಿತರ ಹತ್ಯೆಯಾದಾಗ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲವೇ? ಎಂದು ಕೆಸಿಆರ್ ಪ್ರಶ್ನಿಸಿದರು. ರೈತರ ಸಮಸ್ಯೆಗಳನ್ನು ದಾರಿತಪ್ಪಿಸಲು ಕಾಶ್ಮೀರ ಫೈಲ್ಸ್ ಸಿನಿಮಾ ಮುಂದಿಡಲಾಗಿದೆ ಎಂದರು.
ಸಿಎಂ ಕೆಸಿಆರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರು, ಎಂಎಲ್ಸಿಗಳು, ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು, ಪಕ್ಷದ ಜಿಲ್ಲಾಧ್ಯಕ್ಷರು, ಜೆಡಿಪಿ ಅಧ್ಯಕ್ಷರು, ರಾಜ್ಯ ಮಟ್ಟದ ನಿಗಮಗಳ ಅಧ್ಯಕ್ಷರು, ಡಿಸಿಸಿಬಿ, ಡಿಸಿಎಂಎಸ್ ಮತ್ತು ರೈತ ಬಂಧು ಸಮಿತಿಯ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು. ಸಂಸದೀಯ ಪಕ್ಷದ ನಾಯಕ ಕೆ.ಕೇಶವರಾವ್, ಲೋಕಸಭೆ ಪಕ್ಷದ ನಾಯಕ ನಾಮ ನಾಗೇಶ್ವರರಾವ್ ಉಪಸ್ಥಿತರಿದ್ದರು.