ಪ್ರಧಾನಿ ಮೋದಿ ವಾರಣಾಸಿಯಿಂದ ಸ್ಪರ್ಧಿಸಬಹುದಾದರೆ, ನಾನು ಬಂಗಾಳದ ಅಸನ್ಸೋಲ್ನಿಂದ ಸ್ಪರ್ಧಿಸಬಹುದು: ಶತೃಘ್ನ ಸಿನ್ಹಾ
ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಬಹುದಾದರೆ, ನಾನು ಬಂಗಾಳದ ಅಸನ್ಸೋಲ್ನಿಂದ ಸ್ಪರ್ಧಿಸಬಹುದು ಎಂದು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ತಿರುಗೇಟು ನೀಡಿದ್ದಾರೆ.
Published: 21st March 2022 02:28 PM | Last Updated: 21st March 2022 02:28 PM | A+A A-

ಶತ್ರುಘ್ನ ಸಿನ್ಹಾ
ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಬಹುದಾದರೆ, ನಾನು ಬಂಗಾಳದ ಅಸನ್ಸೋಲ್ನಿಂದ ಸ್ಪರ್ಧಿಸಬಹುದು ಎಂದು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಬೇಕಾದರೆ ಬಿಜೆಪಿ ಏನು ಮಾಡುತ್ತಿತ್ತು, ಪ್ರಧಾನಿ ಅವರಂತಹ ರಾಷ್ಟ್ರ ನಾಯಕರೇ, ಲೋಕಸಭೆ ಚುನಾವಣೆಯಲ್ಲಿ ಎಲ್ಲಿಂದಲಾದರೂ ಸ್ಪರ್ಧಿಸುವುದನ್ನು ಒಪ್ಪಿಕೊಂಡರೆ, ನನಗೂ ಅದೇ ಅನ್ವಯಿಸುತ್ತದೆ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಶತ್ರುಘ್ನ ಸಿನ್ಹಾ ಅವರು ಬಿಜೆಪಿಯ ಅಗ್ನಿಮಿತ್ರ ಪಾಲ್ ವಿರುದ್ಧ ಕಣಕ್ಕಿಳಿದಿದ್ದು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಸನ್ಸೋಲ್ ಲೋಕಸಭಾ ಕ್ಷೇತ್ರ ಮತ್ತು ಬಳ್ಳಿಗುಂಜೆ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 12 ರಂದು ಉಪಚುನಾವಣೆ ನಡೆಯಲಿದ್ದು, ಏಪ್ರಿಲ್ 16 ರಂದು ಮತ ಎಣಿಕೆ ನಡೆಯಲಿದೆ.
ಇತ್ತೀಚೆಗೆ ಶತ್ರುಘ್ನ ಸಿನ್ಹಾ ಅವರು ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವುದರ ಕುರಿತು ಪಶ್ಚಿಮ ಬಂಗಾಳದ ಬಿಜೆಪಿ ನಾಯಕರಾದ ಸುಕಾಂತ ಮಜುಂದಾರ್ ಮತ್ತು ಅಗ್ನಿಮಿತ್ರ ಪಾಲ್ ಮಾತನಾಡಿ ರಾಜ್ಯಕ್ಕೆ ಶತ್ರುಘ್ನ ಸಿನ್ಹಾ ಅವರು ಹೊರಗಿನವರು ಎಂದು ಲೇವಡಿ ಮಾಡಿದ್ದರು.