ಉಕ್ರೇನ್ ವಿಚಾರವಾಗಿ ಭಾರತದ ನಿಲುವು ಕ್ವಾಡ್ ರಾಷ್ಟ್ರಗಳ ಸಮ್ಮತ: ಆಸ್ಟ್ರೇಲಿಯಾ
ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತದ ನಿಲುವನ್ನು ಕ್ವಾಡ್ ರಾಷ್ಟ್ರಗಳಿಗೆ ಸಮ್ಮತವಾಗಿದ್ದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಲ್ಲಾ ಸಂಪರ್ಕವನ್ನೂ ಉಕ್ರೇನ್ ನಲ್ಲಿ ಸಂಘರ್ಷ ನಿಲ್ಲಿಸುವುದಕ್ಕೆ ಬಳಕೆ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಕ್ವಾಡ್ ಸದಸ್ಯ ರಾಷ್ಟ್ರ ಆಸ್ಟ್ರೇಲಿಯಾ ಹೇಳಿದೆ.
Published: 21st March 2022 02:30 AM | Last Updated: 21st March 2022 03:18 PM | A+A A-

ಪ್ರಧಾನಿ ಮೋದಿ
ನವದೆಹಲಿ: ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತದ ನಿಲುವನ್ನು ಕ್ವಾಡ್ ರಾಷ್ಟ್ರಗಳಿಗೆ ಸಮ್ಮತವಾಗಿದ್ದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಲ್ಲಾ ಸಂಪರ್ಕವನ್ನೂ ಉಕ್ರೇನ್ ನಲ್ಲಿ ಸಂಘರ್ಷ ನಿಲ್ಲಿಸುವುದಕ್ಕೆ ಬಳಕೆ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಕ್ವಾಡ್ ಸದಸ್ಯ ರಾಷ್ಟ್ರ ಆಸ್ಟ್ರೇಲಿಯಾ ಹೇಳಿದೆ.
ಇದನ್ನೂ ಓದಿ: ಪುಟಿನ್ ಪರಮಾಣು ಯುದ್ಧದ ಡ್ರಿಲ್ ಆದೇಶ: ವಿಶ್ವದ ರಾಷ್ಟ್ರಗಳಲ್ಲಿ ತಳಮಳ!
ಪ್ರಧಾನಿ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಚ್ ಮೊರಿಸನ್ ಅವರು ವರ್ಚ್ಯುಯಲ್ ಶೃಂಗಸಭೆಯಲ್ಲಿ ಉಕ್ರೇನ್ ಪರಿಸ್ಥಿತಿಯನ್ನು ಚರ್ಚಿಸುವುದಕ್ಕೂ ಮುನ್ನ ಭಾರತದಲ್ಲಿರುವ ಆಸ್ಟ್ರೇಲಿಯಾ ಹೈ ಕಮಿಷನರ್ ಈ ಹೇಳಿಕೆ ನೀಡಿದ್ದಾರೆ.
ಭಾರತದ ನಿಲುವನ್ನು ಕ್ವಾಡ್ ರಾಷ್ಟ್ರಗಳು ಒಪ್ಪಿಕೊಂಡಿವೆ. ಪ್ರತಿಯೊಂದು ದೇಶವೂ ದ್ವಿಪಕ್ಷೀಯ ಸಂಬಂಧವನ್ನು ಹೊಂದಿರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಸ್ವತಃ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವಾಲಯದ ಹೇಳಿಕೆಗಳಿಂದ, ಪ್ರಧಾನಿ ಮೋದಿ ಸಂಘರ್ಷವನ್ನು ಕೊನೆಗಾಣಿಸಲು ತಮ್ಮ ಎಲ್ಲಾ ಸಂಪರ್ಕಗಳನ್ನೂ ಬಳಕೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಈ ಬಗ್ಗೆ ಯಾವುದೇ ರಾಷ್ಟ್ರಕ್ಕೂ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ವಿದೇಶಾಂಗ ನೀತಿಯನ್ನು ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!
ಉಕ್ರೇನ್ ಮೇಲೆ ರಷ್ಯಾ ದಾಳಿಯ ಬಗ್ಗೆ ಭಾರತದ ನಿಲುವಿಗೆ ಹಾಗೂ ರಷ್ಯಾದಿಂದಲೇ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವುದರ ಬಗ್ಗೆ ಪಶ್ಚಿಮದ ರಾಷ್ಟ್ರಗಳಿಂದ ಹೆಚ್ಚುತ್ತಿರುವ ಅಸಮಾಧಾನದ ಬಗ್ಗೆ ಆಸ್ಟ್ರೇಲಿಯಾ ಹೈಕಮಿಷನರ್ ಕಚೇರಿ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಭಾರತದ ವಿರುದ್ಧ ಉಕ್ರೇನ್ ನಲ್ಲಿ ನಡೆಯುತ್ತಿರುವುದನ್ನು ಬೆಂಬಲಿಸಿರುವ ಆರೋಪವನ್ನು ಯಾರೂ ಮಾಡಿಲ್ಲ, 65 ವರ್ಷಗಳ ಹಿಂದೆ ನೆಹರು ಅವರು ಹಾಕಿಕೊಟ್ಟ ನೀತಿಯ ಚೌಕಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲು ಭಾರತ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.