
ಸಾಂದರ್ಭಿಕ ಚಿತ್ರ
ನವದೆಹಲಿ: ಸೆಂಟ್ರಲ್ ಯೂನಿವರ್ಸಿಟಿಗಳ ಯುಜಿ ತರಗತಿಗಳಿಗೆ ಇನ್ನುಮುಂದೆ ವಿದ್ಯಾರ್ಥಿಗಳು ಕಾಮನ್ ಪ್ರವೇಶ ಪರೀಕ್ಷೆಯನ್ನು(CUET) ಬರೆದೇ ದಾಖಲಾಗಬೇಕು ಎಂದು ಯುಜಿಸಿ ಚೇರ್ಮೆನ್ ಜಗದೀಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರೀಯ ಶಾಲೆಗಳಲ್ಲಿ ಸಂಸದರ ಕೋಟಾ ರದ್ದು? ರಾಜಕೀಯ ಪಕ್ಷಗಳೊಂದಿಗೆ ಸರ್ಕಾರ ಚರ್ಚೆ
ಈ ವರ್ಷದ ಜುಲೈನಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಯುಜಿ ತರಗತಿ ದಾಖಲಾತಿಗೆ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಟಿಎಂಸಿ ಮುಖಂಡನ ಹತ್ಯೆ ಬೆನ್ನಲ್ಲೇ ಸುಟ್ಟ ಕರಕಲಾದ ಸ್ಥಿತಿಯಲ್ಲಿ ಏಳು ಶವಗಳ ಪತ್ತೆ!
ಯುಜಿ ತರಗತಿ ದಾಖಲಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಎಪ್ರಿಲ್ ಮೊದಲ ವಾರದಿಂದ ಶುರುವಾಗುವುದು ಎಂದು ಜಗದೀಶ್ ಕುಮಾರ್ ತಿಳಿಸಿದ್ದಾರೆ. 2022-23 ಶೈಕ್ಷಣಿಕ ವರ್ಷದಲ್ಲಿ ಯುಜಿ ಮತ್ತು ಪಿಜಿ ತರಗತಿ ದಾಖಲಾತಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ CUET ಪರೀಕ್ಷೆ ಕೈಗೊಳ್ಲಲಿದೆ.
ಇದನ್ನೂ ಓದಿ: ಹಿಜಾಬ್ ತೀರ್ಪು: ಕರ್ನಾಟಕದ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ; ಮಧುರೈನಲ್ಲಿ ಇಬ್ಬರ ಬಂಧನ!
CUET ಪ್ರವೇಶ ಪರೀಕ್ಷೆಯನ್ನು 12ನೇ ತರಗತಿಯ ಸಿಲಬಸ್ ಆಧಾರದಲ್ಲಿ ರೂಪಿಸಲಾಗುವುದು ಎಂದು ಯುಜಿಸಿ ತಿಳಿಸಿದೆ. ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಯಾವುದಾದರೂ ಭಾಷೆಯನ್ನು ಅಭ್ಯರ್ಥಿ ಆರಿಸಿಕೊಳ್ಳಬಹುದು.
ಇದನ್ನೂ ಓದಿ: ದೇಶಾದ್ಯಂತ ಶಾಲೆಗಳಲ್ಲಿ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕು: ಪ್ರಹ್ಲಾದ್ ಜೋಷಿ