ಉತ್ತರಾಖಂಡ್: ನಾಳೆ ಸಂಪುಟ ಸಚಿವರೊಂದಿಗೆ ಮುಖ್ಯಮಂತ್ರಿ ಧಮಿ ಪ್ರಮಾಣ ವಚನ ಸ್ವೀಕಾರ
ಉತ್ತರಾಖಂಡ್ ನಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬಿಜೆಪಿ ಮುಖಂಡ ಪುಷ್ಕರ್ ಸಿಂಗ್ ಧಮಿ, ನಾಳೆ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ..
Published: 22nd March 2022 11:20 AM | Last Updated: 22nd March 2022 01:05 PM | A+A A-

ಪುಷ್ಕರ್ ಸಿಂಗ್ ಧಮಿ
ಡೆಹ್ರಾಡೂನ್: ಉತ್ತರಾಖಂಡ್ ನಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬಿಜೆಪಿ ಮುಖಂಡ ಪುಷ್ಕರ್ ಸಿಂಗ್ ಧಮಿ, ನಾಳೆ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.
ಅಪರಾಹ್ನ 3-30ಕ್ಕೆ ಡೆಹ್ರಾಡೂನ್ ಪರೇಡ್ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಸಂಪುಟದ ಸಚಿವರೊಂದಿಗೆ ಧಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Uttarakhand CM-designate Pushkar Singh Dhami will take oath as the CM on March 23rd at 3.30pm, along with him, the cabinet will also be administered the oath. The swearing-in ceremony will be held at Parade Ground in Dehradun. pic.twitter.com/6oOoSlv5ZX
— ANI UP/Uttarakhand (@ANINewsUP) March 22, 2022
ಧಮಿ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಸೋಮವಾರ ಉತ್ತರಾಖಂಡದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಆ ಮೂಲಕ ಅವರು ಎರಡನೇ ಬಾರಿಗೆ ರಾಜ್ಯದ ಅಧಿಕಾರವನ್ನು ವಹಿಸಿಕೊಳ್ಳಲು ದಾರಿ ಮಾಡಿಕೊಡಲಾಯಿತು.