ಇಡಿಯಿಂದ ಮಹಾರಾಷ್ಟ್ರ ಸಿಎಂ ಸೋದರ ಮಾವನ ಮಾಲೀಕತ್ವದ ಸಂಸ್ಥೆಯ ಆಸ್ತಿ ಜಪ್ತಿ
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸೋದರ ಮಾವನ ಒಡೆತನದ ಕಂಪನಿಗೆ ಸೇರಿದ 6.45 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು
Published: 22nd March 2022 08:20 PM | Last Updated: 22nd March 2022 08:20 PM | A+A A-

ಉದ್ಧವ್ ಠಾಕ್ರೆ
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸೋದರ ಮಾವನ ಒಡೆತನದ ಕಂಪನಿಗೆ ಸೇರಿದ 6.45 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಮುಂಬೈ ಸಮೀಪದ ಥಾಣೆಯಲ್ಲಿರುವ ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈವೇಟ್ ಲಿಮಿಟೆಡ್‌ನ ನೀಲಾಂಬರಿ ಯೋಜನೆಯಲ್ಲಿ 11 ವಸತಿ ಫ್ಲಾಟ್‌ಗಳನ್ನು ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ನವಾಬ್ ಮಲಿಕ್ ನ್ಯಾಯಾಂಗ ಬಂಧನ ಏಪ್ರಿಲ್ 4 ರವರೆಗೆ ವಿಸ್ತರಣೆ
ಠಾಕ್ರೆಯವರ ಪತ್ನಿ ರಶ್ಮಿಯವರ ಸಹೋದರ ಶ್ರೀಧರ್ ಮಾಧವ್ ಪಾಟಂಕರ್ ಅವರು ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈವೇಟ್ ಲಿಮಿಟೆಡ್ ನ "ಮಾಲೀಕರಾಗಿದ್ದಾರೆ" ಎಂದು ಇಡಿ ಹೇಳಿದೆ.
ಪುಷ್ಪಕ್ ಬುಲಿಯನ್ ಹೆಸರಿನ ಕಂಪನಿಯ ವಿರುದ್ಧ ತನಿಖೆ ನಡೆಸಲಾಗುತ್ತಿರುವ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸೋರಿಕೆಯಾದ ಹಣವನ್ನು ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈ.ಲಿ.ನ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ "ಬಳಸಲಾಗಿದೆ" ಎಂದು ಇಡಿ ಆರೋಪಿಸಿದೆ.