ಕೋವಿಡ್ ನಿಂದ ಮಕ್ಕಳಿಗೆ ಹೆಚ್ಚು ತೊಂದರೆ, ಕೂಡಲೇ 'ಪೌಷ್ಟಿಕ' ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಕೇಂದ್ರಕ್ಕೆ ಸೋನಿಯಾ ಆಗ್ರಹ
ಕೋವಿಡ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಬಾಧಿತರಾಗಿದ್ದು, ಅವರಿಗೆ ಕೂಡಲೇ ಪೌಷ್ಠಿಕ ಆಹಾರದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
Published: 23rd March 2022 03:07 PM | Last Updated: 23rd March 2022 03:49 PM | A+A A-

ಲೋಕಸಭೆಯಲ್ಲಿ ಸೋನಿಯಾಗಾಂಧಿ
ನವದೆಹಲಿ: ಕೋವಿಡ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಬಾಧಿತರಾಗಿದ್ದು, ಅವರಿಗೆ ಕೂಡಲೇ ಪೌಷ್ಠಿಕ ಆಹಾರದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅವರು ಕೇಂದ್ರದ ಎನ್ ಡಿಎ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 'ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳು ಹೆಚ್ಚು ತೊಂದರೆಗೀಡಾಗಿದ್ದಾರೆ, ಶಾಲೆಗಳು ಮೊದಲು ಮುಚ್ಚಲ್ಪಟ್ಟವು ಮತ್ತು ಕೊನೆಯದಾಗಿ ತೆರೆದವು, ಶಾಲೆಗಳು ಮುಚ್ಚಿದಾಗ, ಮಧ್ಯಾಹ್ನದ ಊಟವನ್ನು ಸಹ ನಿಲ್ಲಿಸಲಾಯಿತು, ಭದ್ರತಾ ಕಾಯಿದೆ ಮತ್ತು ಸುಪ್ರೀಂ ಕೋರ್ಟ್ ಆದೇಶo ಅನ್ವಯ ಮಕ್ಕಳಿಗೆ ರಾಷ್ಟ್ರೀಯ ಆಹಾರದ ಅಡಿಯಲ್ಲಿ ಪಡಿತರವನ್ನು ನೀಡಲಾಗುತ್ತಿತ್ತು. ಆದರೆ ಇದು ಬಳಿಕ ಸ್ಥಗಿತವಾಗಿತ್ತು ಎಂದು ಹೇಳಿದ್ದಾರೆ.
But there was no alternate for dry ration & cooked meal for children. True that families of children had to face a major crisis to earn a living.Such crisis was never faced before in past few yrs. As children are returning to schools, they need even better nutrition: Sonia Gandhi pic.twitter.com/nBo7ibgvUP
— ANI (@ANI) March 23, 2022
ಅಂತೆಯೇ 'ಒಣ ಪಡಿತರ ಮತ್ತು ಮಕ್ಕಳಿಗೆ ಬೇಯಿಸಿದ ಊಟಕ್ಕೆ ಪರ್ಯಾಯವಿಲ್ಲ. ಮಕ್ಕಳ ಕುಟುಂಬಗಳು ಜೀವನೋಪಾಯಕ್ಕಾಗಿ ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಗಿತ್ತು ಎಂಬುದು ನಿಜ. ಇಂತಹ ಬಿಕ್ಕಟ್ಟು ಕಳೆದ ಕೆಲವು ವರ್ಷಗಳಲ್ಲಿ ನಾವು ಹಿಂದೆಂದೂ ಎದುರಿಸಿರಲಿಲ್ಲ. ಮಕ್ಕಳು ಶಾಲೆಗಳಿಗೆ ಮರಳುತ್ತಿರುವ ಕಾರಣ, ಅವರಿಗೆ ಉತ್ತಮ ಪೋಷಣೆಯ ಅಗತ್ಯವಿದೆ. ಹೀಗಾಗಿ 'ಪೌಷ್ಟಿಕತೆಯ' ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಹಾಲಿ ನೀಡುತ್ತಿರುವ ಆಹಾರದ ಜೊತೆಗೆ ದ್ವಿಗುಣದಲ್ಲಿ ಪೌಷ್ಟಿಕ ಆಹಾರ ನೀಡಬೇಕು ಎಂದು ಹೇಳಿದ್ದಾರೆ.
'ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳು ಹೆಚ್ಚು ಬಾಧಿತರಾಗಿದ್ದಾರೆ. ಶಾಲೆಗಳು ಮೊದಲು ಮುಚ್ಚಲ್ಪಟ್ಟವು ಮತ್ತು ಕೊನೆಯದಾಗಿ ತೆರೆಯಲ್ಪಟ್ಟವು. ಶಾಲೆಗಳು ಮುಚ್ಚಿದಾಗ ಮಧ್ಯಾಹ್ನದ ಊಟವೂ ಸ್ಥಗಿತಗೊಂಡಿತ್ತು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ಆದೇಶದ ಅಡಿಯಲ್ಲಿ ಜನರಿಗೆ ಪಡಿತರವನ್ನು ನೀಡಲಾಗಿದೆ. ಆದರೆ ಒಣ ಪಡಿತರ ಮತ್ತು ಮಕ್ಕಳಿಗೆ ಬೇಯಿಸಿದ ಊಟಕ್ಕೆ ಪರ್ಯಾಯವಿಲ್ಲ. ಮಕ್ಕಳ ಕುಟುಂಬಗಳು ಜೀವನೋಪಾಯಕ್ಕಾಗಿ ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಯಿತು ನಿಜ. ಇಂತಹ ಬಿಕ್ಕಟ್ಟು ಕಳೆದ ಕೆಲವು ವರ್ಷಗಳಲ್ಲಿ ಹಿಂದೆಂದೂ ಎದುರಿಸಿರಲಿಲ್ಲ. ಮಕ್ಕಳು ಶಾಲೆಗೆ ಮರಳುತ್ತಿದ್ದಂತೆ ಅವರಿಗೆ ಉತ್ತಮ ಪೌಷ್ಟಿಕಾಂಶದ ಅಗತ್ಯವಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.