
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ರಾಜ್ಯಸಭೆಗೆ ಆಯ್ಕೆಯಾದ ಐವರು ಎಎಪಿ ಅಭ್ಯರ್ಥಿಗಳು
ಚಂಡೀಗಡ: ಪಂಜಾಬಿನಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ಐವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್, ಪಕ್ಷದ ಮುಖಂಡ ರಾಘವ್ ಚಾಡ್ಡಾ, ಲವ್ಲಿ ಪ್ರೊಫೆಸಲ್ ವಿವಿ ಸ್ಥಾಪಕ ಅಶೋಕ್ ಮಿತ್ತಲ್, ದೆಹಲಿ ಐಐಟಿ ಪ್ರೊಫೆಸರ್ ಸಂದೀಪ್ ಪಠಾಕ್, ಮತ್ತು ಉದ್ಯಮಿ ಸಂಜೀವ್ ಅವರನ್ನು ಮಾರ್ಚ್ 31 ರಂದು ನಡೆಯಲಿರುವ ಚುನಾವಣೆಗಾಗಿ ಎಎಪಿ ನಾಮನಿರ್ದೇಶನ ಮಾಡಿತ್ತು.
ಇದನ್ನೂ ಓದಿ: ದೆಹಲಿ: ಶಾಸಕ ಸ್ಥಾನಕ್ಕೆ ಎಎಪಿ ನಾಯಕ ರಾಘವ್ ಚಡ್ಡಾ ರಾಜೀನಾಮೆ
ಅಭ್ಯರ್ಥಿ ಹಿಂದಕ್ಕೆ ಪಡೆಯಲು ಗುರುವಾರ ಕೊನೆಯ ದಿನವಾಗಿತ್ತು. ಎಲ್ಲಾ ಐವರು ಅಭ್ಯರ್ಥಿಗಳು ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುರಿಂದರ್ ಪಾಲ್ ತಿಳಿಸಿದ್ದಾರೆ. ರಾಜ್ಯಸಭಾ ಚುನಾವಣೆಗಾಗಿ ಪಂಜಾಬಿನಿಂದ ಇತರ ರಾಜಕೀಯ ಪಕ್ಷಗಳು ಯಾವುದೇ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿಲ್ಲ.