ಮೌನ ಮುರಿದ ಉದ್ಧವ್ ಠಾಕ್ರೆ; ಮಹಾರಾಷ್ಟ್ರ ಆಳಲು ಬಯಸಿದರೆ ನನ್ನನ್ನು ಜೈಲಿಗೆ ಹಾಕಿ: ಬಿಜೆಪಿಗೆ ಮಹಾ ಸಿಎಂ ಸವಾಲು
ಜಾರಿ ನಿರ್ದೇಶನಾಲಯ(ಇಡಿ) 2017ರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಸೋದರ ಮಾವ ಶ್ರೀಧರ್ ಪಾಟಂಕರ್ ಅವರ 6.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು...
Published: 25th March 2022 08:17 PM | Last Updated: 25th March 2022 08:17 PM | A+A A-

ಉದ್ಧವ್ ಠಾಕ್ರೆ
ಮುಂಬೈ: ಜಾರಿ ನಿರ್ದೇಶನಾಲಯ(ಇಡಿ) 2017ರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಸೋದರ ಮಾವ ಶ್ರೀಧರ್ ಪಾಟಂಕರ್ ಅವರ 6.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮೌನ ಮುರಿದಿದ್ದಾರೆ.
"ಅಧಿಕಾರ ಬೇಕಾದರೆ ನಿಮ್ಮೊಂದಿಗೆ ಸೇರಲು ಸಿದ್ಧ ಎಂದು ನಾನು ಬಿಜೆಪಿಗೆ ಬಹಿರಂಗವಾಗಿ ಮನವಿ ಮಾಡುತ್ತೇನೆ. ಆದರೆ ಬಿಜೆಪಿಯವರು ಮಾಡುತ್ತಿರುವ ಆರೋಪಗಳ ಸಂಬಂಧ ಮೊದಲು ನನ್ನನ್ನು ಜೈಲಿಗೆ ಹಾಕಬೇಕು. ನಾನು ಅಧಿಕಾರಕ್ಕಾಗಿ ಬಿಜೆಪಿಗೆ ಸೇರುವುದಿಲ್ಲ. ಆದರೆ ಅವರ ಕೆಟ್ಟ ಮನಸ್ಸಿನ ಆಸೆಯನ್ನು ಈಡೇರಿಸಲು ನಿಮ್ಮ ಜೊತೆ ಕೈಜೋಡಿಸುತ್ತೇನೆ. 1993ರ ದಂಗೆಯ ಸಂದರ್ಭದಲ್ಲಿ ಜನರ ಜೀವವನ್ನು ಉಳಿಸಿದ ನನ್ನ ಕುಟುಂಬ ಮತ್ತು ಶಿವಸೈನಿಕರನ್ನು ಗುರಿಯಾಗಿಸುವುದನ್ನು ಬಿಜೆಪಿ ನಿಲ್ಲಿಸಬೇಕು" ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇದನ್ನು ಓದಿ: ಇಡಿಯಿಂದ ಮಹಾರಾಷ್ಟ್ರ ಸಿಎಂ ಸೋದರ ಮಾವನ ಮಾಲೀಕತ್ವದ ಸಂಸ್ಥೆಯ ಆಸ್ತಿ ಜಪ್ತಿ
"ಬಿಜೆಪಿ ನಮ್ಮ ವಿರುದ್ಧ ಹೋರಾಡಲು ಬಯಸಿದರೆ, ಬಹಿರಂಗವಾಗಿ ನೇರವಾಗಿ ಹೋರಾಡಿ. ಆದರೆ ನಮ್ಮ ಕುಟುಂಬಗಳನ್ನು ಗುರಿಯಾಗಿಸಲು ಏಜೆನ್ಸಿಗಳನ್ನು ಬಳಸಿಕೊಳ್ಳಬೇಡಿ.. ಇದು ಧೈರ್ಯ ಅಥವಾ ಪುರುಷತ್ವವಲ್ಲ. ನಾವು ಯಾರ ಕುಟುಂಬದ ಸದಸ್ಯರನ್ನು ಗುರಿಯಾಗಿಸಿಕೊಂಡಿಲ್ಲ. ನಿಮ್ಮ ಕುಟುಂಬದ ಸಮಸ್ಯೆಗಳನ್ನು ನಾವು ಸಾರ್ವಜನಿಕವಾಗಿ ಬಹಿರಂಗಪಡಿಸಲಿಲ್ಲ" ಎಂದು ಮಹಾರಾಷ್ಟ್ರ ಸಿಎಂ ಹೇಳಿದ್ದಾರೆ.
ಬಿಜೆಪಿಯ ಅನೇಕರು ನಾಯಕನನ್ನು(ನರೇಂದ್ರ ಮೋದಿ) ತೆಗೆದುಹಾಕಲು ಬಯಸಿದಾಗ, ಬಾಳಾಸಾಹೇಬ್ ಠಾಕ್ರೆ ಅವರ ಬೆಂಬಲಕ್ಕೆ ನಿಂತರು ಎಂದು ನೆನಪಿಸಿದ ಉದ್ಧವ್ ಠಾಕ್ರೆ, "ನಿಮ್ಮನ್ನು ಬೆಂಬಲಿಸಿದ್ದಕ್ಕೆ ನಮಗೆ ಏನು ಸಿಗುತ್ತಿದೆ? ಬಾಳಾಸಾಹೇಬ್ ಠಾಕ್ರೆಗೆ ನೀವು ಏನು ಉತ್ತರ ನೀಡುತ್ತೀರಿ?" ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಮಹಾ ಸಿಎಂ ಆರೋಪಿಸಿದ್ದಾರೆ.