ಕೋವಿಡ್ ಲಸಿಕೆಯಿಂದ ಅಸ್ವಸ್ಥಗೊಂಡ ನಾಲ್ವರು ಬಾಲಕಿಯರು; ಸದ್ಯ ಆರೋಗ್ಯ ಸ್ಥಿರ!
12ರಿಂದ 14 ವರ್ಷ ವಯಸ್ಸಿನ ನಾಲ್ವರು ಹುಡುಗಿಯರು ಕೋವಿಡ್-19 ವಿರುದ್ಧ ಲಸಿಕೆ ಹಾಕಿಸಿಕೊಂಡ ನಂತರ ಅಸ್ವಸ್ಥರಾದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 25th March 2022 05:00 PM | Last Updated: 25th March 2022 05:00 PM | A+A A-

ಸಂಗ್ರಹ ಚಿತ್ರ
ಸಾತ್ನಾ: 12ರಿಂದ 14 ವರ್ಷ ವಯಸ್ಸಿನ ನಾಲ್ವರು ಹುಡುಗಿಯರು ಕೋವಿಡ್-19 ವಿರುದ್ಧ ಲಸಿಕೆ ಹಾಕಿಸಿಕೊಂಡ ನಂತರ ಅಸ್ವಸ್ಥರಾದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಅವರೆಲ್ಲರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್ಒ) ಡಾ ಅಶೋಕ್ ಕುಮಾರ್ ಅವಧಿಯಾ ತಿಳಿಸಿದ್ದಾರೆ.
ಆಮದಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ 12-14 ವಯೋಮಾನದ ಸುಮಾರು 50 ಮಕ್ಕಳಿಗೆ ಲಸಿಕೆಯನ್ನು ಹಾಕಲಾಯಿತು. ಅವರಲ್ಲಿ ನಾಲ್ವರು, ಸ್ಥಳೀಯ ಶಾಲೆಯ ವಿದ್ಯಾರ್ಥಿಗಳಿಗೆ ತಲೆತಿರುಗಿದಂತಾಗಿ ನೆಲದ ಮೇಲೆ ಬಿದ್ದರು, ಬಹುಶಃ ಭಯದಿಂದ ಆ ರೀತಿ ಆಗಿರಬಹುದೆಂದು ಅವಧಿಯಾ ಹೇಳಿದರು.
ಅಸ್ವಸ್ಥಗೊಂಡ ನಾಲ್ವರನ್ನು ಮೈಹಾರ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸತ್ನಾದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಾಯದಿಂದ ಪಾರಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಅನುರಾಗ್ ವರ್ಮಾ ಅವರು ಸತ್ನಾದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಘಟನೆಯ ಕುರಿತು ರಾಜ್ಯ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ತನಿಖೆ ಆರಂಭಿಸಿದೆ. ಬುಧವಾರ ಮಧ್ಯಪ್ರದೇಶದಲ್ಲಿ 12-14 ವಯಸ್ಸಿನ ಮಕ್ಕಳಿಗೆ ಕರೋನವೈರಸ್ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಯಿತು. ಕಾರ್ಬೆವಾಕ್ಸ್ ಲಸಿಕೆಯನ್ನು ಈ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತಿದೆ.