
ಸಾಂದರ್ಭಿಕ ಚಿತ್ರ
ಮುಜಾಫರ್ ನಗರ: ಪತಿಯ ಎದುರಲ್ಲಿಯೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿ ವರದಿಯಾಗಿದೆ.
ದಂಪತಿ ಬುಧವಾರ ರಾತ್ರಿ ತಮ್ಮ ಗ್ರಾಮಕ್ಕೆ ಹಿಂದಿರುಗುವಾಗ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಕುಟುಂಬ ದಾಖಲಿಸಿರುವ ದೂರಿನ ಪ್ರಕಾರ, ಅತ್ತೆಯ ಮನೆಯಿಂದ ರಾತ್ರಿ ನಡೆದು ಬರುತ್ತಿರುವಾಗ ಎದುರಾದ 10 ಮಂದಿ ಕೀಚಕರು, ಹತ್ತಿರದಲ್ಲಿದ್ದ ಮಾವಿನ ತೋಟವೊಂದಕ್ಕೆ ಕರೆದೊಯ್ದಿದ್ದು, ಪತಿಯನ್ನು ಮರವೊಂದಕ್ಕೆ ಕಟ್ಟಿ ಹಾಕಿ, ಆತನ ಪತ್ನಿ ಮೇಲೆ ನಾಲ್ವರು ಅತ್ಯಾಚಾರ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ನ್ಯೂ ಮಂಡಿ ಪೊಲೀಸ್ ಠಾಣೆಯಲ್ಲಿ ಗುರುವಾರ ಕೇಸ್ ದಾಖಲಾಗಿದೆ. ಇಬ್ಬರು ಅಪ್ರಾಪ್ತರು ಸೇರಿದಂತೆ 10 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಎಸ್ ಪಿ ಅರ್ಪಿತ್ ವಿಜಯ್ ವರ್ಗೀಯಾ ಹೇಳಿದ್ದಾರೆ.