ಡ್ಯಾನಿಶ್ ಅನ್ಸಾರಿ: ಯೋಗಿ 2.0 ಸರ್ಕಾರದಲ್ಲಿರುವ ಮುಸ್ಲಿಂ ಸಮುದಾಯದ ಏಕೈಕ ಸಚಿವ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ 2.0 ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಸಂಪುಟದಲ್ಲಿ ಈ ಬಾರಿ ಮುಸ್ಲಿಂ ಸಮುದಾಯದ ಓರ್ವ ವ್ಯಕ್ತಿಗೆ ಸ್ಥಾನ ಲಭಿಸಿದೆ.
Published: 25th March 2022 08:17 PM | Last Updated: 25th March 2022 08:17 PM | A+A A-

ಡ್ಯಾನಿಶ್ ಅನ್ಸಾರಿ
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ 2.0 ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಸಂಪುಟದಲ್ಲಿ ಈ ಬಾರಿ ಮುಸ್ಲಿಂ ಸಮುದಾಯದ ಓರ್ವ ವ್ಯಕ್ತಿಗೆ ಸ್ಥಾನ ಲಭಿಸಿದೆ.
ಡ್ಯಾನಿಶ್ ಆಜಾದ್ ಅನ್ಸಾರಿ ಯೋಗಿ ಸರ್ಕಾರದ ಏಕೈಕ ಮುಸ್ಲಿಂ ಸಚಿವರಾಗಿದ್ದಾರೆ. ಬಾಲ್ಲಿಯಾ ಮೂಲದ ಅನ್ಸಾರಿ ಈ ಹಿಂದಿನ ಸರ್ಕಾರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವರಾಗಿದ್ದ ಮೊಹ್ಸಿನ್ ರಾಜಾ ಅವರ ಸ್ಥಾನವನ್ನು ಹೊಸ ಸರ್ಕಾರದಲ್ಲಿ ಅನ್ಸಾರಿ ತುಂಬಲಿದ್ದಾರೆ.
ರಾಜ್ಯ ಖಾತೆ ಸಚಿವರಾಗಿ ಅನ್ಸಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 32 ವರ್ಷದ ಡ್ಯಾನಿಶ್ ಲಖನೌ ವಿವಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ್ನು ಸೇರಿದ್ದರು. 2018 ರಲ್ಲಿ ಯೋಗಿ ಸರ್ಕಾರದಲ್ಲಿ ಡ್ಯಾನಿಶ್ ಅವರನ್ನು ಉರ್ದು ಭಾಷೆ ಸಮಿತಿಗೆ ರಾಜ್ಯ ಖಾತೆ ಸಚಿವರ ಸ್ಥಾನಮಾನ ನೀಡಿ ನೇಮಕ ಮಾಡಲಾಗಿತ್ತು.
ವಿಧಾನಸಭೆ ಚುನಾವಣೆಗೂ ಮುನ್ನ ಡ್ಯಾನಿಶ್ ಅವರನ್ನು ಬಿಜೆಪಿಯ ಅಲ್ಪಸಂಖ್ಯಾತ ಸೆಲ್ ನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.