ಪ್ರಧಾನಿ ಮೋದಿ ಆಪ್ತ, ಮಾಜಿ ಐಎಎಸ್ ಅಧಿಕಾರಿ ಎಕೆ ಶರ್ಮಾಗೆ ಯೋಗಿ ಸಚಿವ ಸಂಪುಟದಲ್ಲಿ ಸ್ಥಾನ
ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಪ್ತರು ಎಂದೇ ಬಿಂಬಿಸಲಾಗಿರುವ ಮಾಜಿ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಶರ್ಮಾ ರಾಜಕೀಯ ಜೀವನದ ಹೊಸ ಇನ್ನಿಂಗ್ಸ್ ನ್ನು ಉತ್ತರ ಪ್ರದೇಶ ಸಚಿವರಾಗುವ ಮೂಲಕ ಪ್ರಾರಂಭಿಸಿದ್ದಾರೆ.
Published: 25th March 2022 09:40 PM | Last Updated: 25th March 2022 09:40 PM | A+A A-

ಎಕೆ ಶರ್ಮ
ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಪ್ತರು ಎಂದೇ ಬಿಂಬಿಸಲಾಗಿರುವ ಮಾಜಿ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಶರ್ಮಾ ರಾಜಕೀಯ ಜೀವನದ ಹೊಸ ಇನ್ನಿಂಗ್ಸ್ ನ್ನು ಉತ್ತರ ಪ್ರದೇಶ ಸಚಿವರಾಗುವ ಮೂಲಕ ಪ್ರಾರಂಭಿಸಿದ್ದಾರೆ.
ಐಎಎಸ್ ನಿಂದ ಸ್ವಯಂ ನಿವೃತ್ತಿ ಪಡೆದು ಯುಪಿ ವಿಧಾನ ಪರಿಷತ್ ನ ಸದಸ್ಯರಾಗುವ ಮೂಲಕ ಶರ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು.
ಗುಜರಾತ್ ಕೇಡರ್ ನ ಅಧಿಕಾರಿಯಾಗಿರುವ ಶರ್ಮ ಉತ್ತರ ಪ್ರದೇಶದ ಮೌ ಜಿಲ್ಲೆಯ ಮೂಲದವರಾಗಿದ್ದು, ಗುಜರಾತ್ ನಲ್ಲಿ ಮೋದಿ ಸಿಎಂ ಆಗಿದ್ದಾಗ ಮೋದಿ ಅವರೊಂದಿಗೆ ಕಾರ್ಯನಿರ್ವಹಿಸಿದ್ದರು.
ಮೋದಿ ಪ್ರಧಾನಿಯಾದ ಬಳಿಕ ಶರ್ಮ ಪ್ರಧಾನಿ ಕಾರ್ಯಾಲಯದಲ್ಲಿಯೂ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ ಜನವರಿಯಲ್ಲಿ ಸ್ವಯಂ ನಿವೃತ್ತಿ ಪಡೆದ ಬಳಿಕ ಶರ್ಮ ಬಿಜೆಪಿ ಸೇರಿ ಉತ್ತರ ಪ್ರದೇಶದ ಉಪಾಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದರು.
ಉತ್ತರ ಪ್ರದೇಶದಲ್ಲಿ ಅವರ ಆಗಮದ ಬಳಿಕ ಅವರಿಗೆ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗುತ್ತದೆ ಎಂಬ ಊಹಾಪೋಹಗಳಿತ್ತು. ಕೋವಿಡ್-19 ನ ಎರಡನೇ ಅವಧಿಯಲ್ಲಿ ವಾರಣಾಸಿ ಕ್ಷೇತ್ರದಲ್ಲಿ ಅವರ ಕಾರ್ಯವೈಖರಿಯಿಂದ ಶರ್ಮ ಅವರು ಹೆಚ್ಚು ಗುರುತಿಸಿಕೊಂಡು ಪ್ರಧಾನಿಯಿಂದ ಮೆಚ್ಚುಗೆಯನ್ನೂ ಗಳಿಸಿದ್ದರು.