ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತು ಟ್ವೀಟ್: ಮಧ್ಯ ಪ್ರದೇಶ ಐಎಎಸ್ ಅಧಿಕಾರಿಗೆ ಶೋಕಾಸ್ ನೋಟಿಸ್
ಬಹು ಚರ್ಚೆಗೆ ಗ್ರಾಸವಾಗಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ಟ್ವೀಟ್ ಮಾಡಿದ ಐಎಎಸ್ ಅಧಿಕಾರಿ ನಿಯಾಜ್ ಖಾನ್ ಅವರಿಗೆ ಮಧ್ಯ ಪ್ರದೇಶ ಸರ್ಕಾರ ಶುಕ್ರವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
Published: 25th March 2022 03:20 PM | Last Updated: 25th March 2022 03:20 PM | A+A A-

ದಿ ಕಾಶ್ಮೀರ್ ಫೈಲ್ಸ್ ಸ್ಟಿಲ್
ಭೋಪಾಲ್: ಬಹು ಚರ್ಚೆಗೆ ಗ್ರಾಸವಾಗಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ಟ್ವೀಟ್ ಮಾಡಿದ ಐಎಎಸ್ ಅಧಿಕಾರಿ ನಿಯಾಜ್ ಖಾನ್ ಅವರಿಗೆ ಮಧ್ಯ ಪ್ರದೇಶ ಸರ್ಕಾರ ಶುಕ್ರವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ನಿಯಾಜ್ ಖಾನ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ಮಾಡಿರುವ ಟ್ವೀಟ್ ದ್ವೇಷ ಹರಡುವಂತಿದೆ ಮತ್ತು ಸೇವಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಇದನ್ನು ಓದಿ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿ: ತೆರಿಗೆ ವಿನಾಯಿತಿ ಕೇಳಿದ ಬಿಜೆಪಿಗೆ ಕೇಜ್ರಿವಾಲ್ ಟಾಂಗ್
ರಾಜ್ಯ ಲೋಕೋಪಯೋಗಿ ಇಲಾಖೆಯ ಉಪಕಾರ್ಯದರ್ಶಿ ಖಾನ್ ಅವರು ನೋಟಿಸ್ ಸ್ವೀಕರಿಸಿರುವುದನ್ನು ಖಚಿತಪಡಿಸಿದ್ದಾರೆ ಮತ್ತು ಏಳು ದಿನಗಳಲ್ಲಿ ಅದಕ್ಕೆ ಉತ್ತರ ನೀಡುವುದಾಗಿ ಹೇಳಿದ ಅವರು ನೋಟಿಸ್ ನಲ್ಲಿ ಉಲ್ಲೇಖಿಸಿರುವ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಖಾನ್ ಕಳೆದ ವಾರ “ದಿ ಕಾಶ್ಮೀರ್ ಫೈಲ್ಸ್” ತಯಾರಕರು ಭಾರತದಲ್ಲಿ “ಹಲವು ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರ ಹತ್ಯೆಗಳ” ಬಗ್ಗೆ ಚಲನಚಿತ್ರ ಮಾಡಬೇಕು ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ಚಿತ್ರದಿಂದ ಬಂದ ಲಾಭವನ್ನು ಕಾಶ್ಮೀರಿ ಪಂಡಿತರ ಮಕ್ಕಳ ಶಿಕ್ಷಣ ಮತ್ತು ಕಾಶ್ಮೀರದಲ್ಲಿ ಅವರಿಗಾಗಿ ಮನೆಗಳ ನಿರ್ಮಾಣಕ್ಕಾಗಿ ನೀಡುವಂತೆ ಟ್ವಿಟರ್ ಮೂಲಕ “ದಿ ಕಾಶ್ಮೀರ್ ಫೈಲ್ಸ್” ನಿರ್ಮಾಪಕರಿಗೆ ಮನವಿ ಮಾಡಿದ್ದರು.
ಬುಧವಾರ, ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಖಾನ್ ಅವರ ಟ್ವೀಟ್ ಗಳು ಗಂಭೀರ ವಿಷಯವಾಗಿದ್ದು, ರಾಜ್ಯ ಸರ್ಕಾರ ಅವರಿಗೆ ಶೋಕಾಸ್ ನೋಟಿಸ್ ನೀಡಲಿದೆ ಎಂದು ಹೇಳಿದ್ದರು.
ಝೀ ಸ್ಟುಡಿಯೋಸ್ ನಿರ್ಮಿಸಿದ “ದಿ ಕಾಶ್ಮೀರ್ ಫೈಲ್ಸ್” ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಸಮುದಾಯದ ಜನರನ್ನು ವ್ಯವಸ್ಥಿತವಾಗಿ ಹತ್ಯೆಗೈದ ನಂತರ ಕಾಶ್ಮೀರಿ ಹಿಂದೂಗಳ ನಿರ್ಗಮನವನ್ನು ಚಿತ್ರಿಸುತ್ತದೆ.
ಮಾರ್ಚ್ 11 ರಂದು ಬಿಡುಗಡೆಯಾದ ಈ ಚಿತ್ರವು ಕಾಶ್ಮೀರಿ ಪಂಡಿತರ ದುರಂತವನ್ನು ಸಿನಿಮೀಯವಾಗಿ ಹೇಗೆ ಪರಿಗಣಿಸಬೇಕು ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಮಧ್ಯಪ್ರದೇಶ ಮತ್ತು ಗುಜರಾತ್ ಸೇರಿದಂತೆ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಚಿತ್ರಕ್ಕೆ ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಿವೆ.