ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್; 3 ಹಂತದಲ್ಲಿ ಮಾರ್ಚ್ 31ರಿಂದ ದೇಶಾದ್ಯಂತ ಪ್ರತಿಭಟನೆ
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಶನಿವಾರ ಮೂರು ಹಂತದ ಪ್ರತಿಭಟನಾ ಅಭಿಯಾನವನ್ನು ಘೋಷಿಸಿದ್ದು, "ಮೆಹಂಗೈ-ಮುಕ್ತ್ ಭಾರತ್ ಅಭಿಯಾನ್"ದ ಅಡಿಯಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 7 ರವರೆಗೆ ದೇಶಾದ್ಯಂತ ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಿದೆ.
Published: 26th March 2022 06:53 PM | Last Updated: 26th March 2022 08:41 PM | A+A A-

ರಣದೀಪ್ ಸುರ್ಜೇವಾಲ
ನವದೆಹಲಿ: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಶನಿವಾರ ಮೂರು ಹಂತದ ಪ್ರತಿಭಟನಾ ಅಭಿಯಾನವನ್ನು ಘೋಷಿಸಿದ್ದು, "ಮೆಹಂಗೈ-ಮುಕ್ತ್ ಭಾರತ್ ಅಭಿಯಾನ್"ದ ಅಡಿಯಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 7 ರವರೆಗೆ ದೇಶಾದ್ಯಂತ ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಿದೆ.
आज मोदी सरकार ने एक बार फिर पेट्रोल-डीज़ल के दामों में 80 पैसे प्रति लीटर की बढ़ोत्तरी कर दी
— Randeep Singh Surjewala (@rssurjewala) March 26, 2022
पिछले 5 दिन में यह चौथी बार बढ़ोत्तरी की गई है, जिसके बाद पेट्रोल-डीज़ल के दाम 3.20rs/लीटर बढ़ें हैं
देश की जनता के साथ यह विश्वासघात व छल है#MahangaiMuktBharat #महँगाई_मुक्त_भारत pic.twitter.com/ZBDW3ZCRvo
ಶನಿವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಆಂದೋಲನವನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೊದಲ ಹಂತದ ಅಭಿಯಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾಮಾನ್ಯ ಜನರು ಮಾರ್ಚ್ 31 ರಂದು ತಮ್ಮ ಮನೆಗಳ ಹೊರಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಜನರು ಎಲ್ಪಿಜಿ ಸಿಲಿಂಡರ್ಗಳಿಗೆ ಹಾರ ಹಾಕಿ, ಡ್ರಮ್ ಬಾರಿಸುತ್ತಾರೆ. ಆ ಮೂಲಕ ಹಣದುಬ್ಬರದ ಸಮಸ್ಯೆಯನ್ನು ಎತ್ತಿ ತೋರಿಸುತ್ತಾರೆ. ಅಂತೆಯೇ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದುಸ್ತರ ಹೆಚ್ಚಳದ ವಿರುದ್ಧ ಕಿವುಡ ಬಿಜೆಪಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.
भारतीय जनता पार्टी निर्मित महंगाई
— Randeep Singh Surjewala (@rssurjewala) March 26, 2022
केवल मुट्ठी भर अमीरों को छोड़ देती है..
बाकी सबको निचोड़ देती है...
“अच्छे दिनों की लूट” ने भारतीयों का बजट बिगाड़ दिया है।#MahangaiMuktBharat #महँगाई_मुक्त_भारत pic.twitter.com/Y44o6tOnNO
"ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳೊಂದಿಗೆ ಸಮಾಲೋಚಿಸಿ, ಮೂರು-ಹಂತದ ಕಾರ್ಯಕ್ರಮ -- 'ಮೆಹಂಗೈ-ಮುಕ್ತ್ ಭಾರತ್' ಅಭಿಯಾನದಲ್ಲಿ ಜನರ ಪರವಾಗಿ ಹೋರಾಡಲು ನಿರ್ಧರಿಸಿದ್ದಾರೆ" ಎಂದು ಸುರ್ಜೆವಾಲಾ ಹೇಳಿದರು.
After keeping prices of Petrol-Diesel,Gas Cylinder, PNG & CNG unchanged for 137 days to secure votes, last one week has been a nightmare for budget of every household
— Randeep Singh Surjewala (@rssurjewala) March 26, 2022
Every day increase in prices proved the dictum for Modi Govt-
“Fleece the People, Fill Coffers”
Our Statement- pic.twitter.com/oug6R76sqp
ಏಪ್ರಿಲ್ 2 ರಿಂದ ಏಪ್ರಿಲ್ 4 ರವರೆಗೆ ಕಾಂಗ್ರೆಸ್, ಎನ್ಜಿಒಗಳು, ಧಾರ್ಮಿಕ, ಸಾಮಾಜಿಕ ಸಂಸ್ಥೆಗಳು ಮತ್ತು ನಿವಾಸಿ ಕಲ್ಯಾಣ ಸಂಸ್ಥೆಗಳೊಂದಿಗೆ ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಧರಣಿ ಮತ್ತು ಮೆರವಣಿಗೆಗಳನ್ನು ಆಯೋಜಿಸುತ್ತದೆ. ಏಪ್ರಿಲ್ 7 ರಂದು, ಕಾಂಗ್ರೆಸ್ ಪಕ್ಷವು ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು, ಎನ್ಜಿಒಗಳು ಮತ್ತು ಜನರ ಸಹಾಯದಿಂದ “ಮೆಹಂಗೈ-ಮುಕ್ತ್ ಭಾರತ್” ಧರಣಿ ಮತ್ತು ಮೆರವಣಿಗೆಗಳನ್ನು ಎಲ್ಲಾ ರಾಜ್ಯ ಪ್ರಧಾನ ಕಚೇರಿಗಳಲ್ಲಿ ಆಯೋಜಿಸಲಿದೆ ಎಂದು ಸುರ್ಜೆವಾಲಾ ಹೇಳಿದರು.
ಇದನ್ನೂ ಓದಿ: ಉಕ್ರೇನ್- ರಷ್ಯಾ ಯುದ್ಧದಿಂದಾಗಿ ಇಂಧನ ಬೆಲೆಯೇರಿಕೆ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಮರ್ಥನೆ
ಅಂತೆಯೇ "ಭಾರತದ ಜನರಿಗೆ (ನರೇಂದ್ರ) ಮೋದಿ ಸರ್ಕಾರದಿಂದ ದ್ರೋಹ, ವಂಚನೆ ಮತ್ತು ವಂಚನೆ ಮಾಡಲಾಗಿದ್ದು, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ಗಳು, ಕೊಳವೆ ನೈಸರ್ಗಿಕ ಅನಿಲ (ಪಿಎನ್ಜಿ) ಮತ್ತು ಸಿಎನ್ಜಿ ಬೆಲೆಗಳನ್ನು 137 ದಿನಗಳವರೆಗೆ ಬದಲಾಯಿಸದೆ ಜನರ ಮತಗಳನ್ನು ಭದ್ರಪಡಿಸಿದ ನಂತರ, ಕಳೆದ ಒಂದು ವಾರದಲ್ಲಿ ಎಲ್ಲ ವಸ್ತುಗಳ ದರಗಳನ್ನು ಏರಿಸುವ ಮೂಲಕ ಪ್ರತಿ ಮನೆಯವರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಕೋವಿಡ್ ರೋಗಿಗಳು ಸೇರಿದಂತೆ ಯಾರ ಬಗ್ಗೆಯೂ ಕಾಳಜಿ ಇಲ್ಲ: ರಾಹುಲ್ ಗಾಂಧಿ
ಕೇಂದ್ರ ಸರ್ಕಾರವು ಶನಿವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 80 ಪೈಸೆ ಹೆಚ್ಚಿಸಿದೆ. ಐದು ದಿನಗಳಲ್ಲಿ ನಾಲ್ಕನೇ ಹೆಚ್ಚಳವಾಗಿದ್ದು, ಲೀಟರ್ಗೆ ಒಟ್ಟು 3.2 ರೂ. ವಾದಂತಾಗಿದೆ.
ಇದನ್ನೂ ಓದಿ: 'ನಾವು ನೆಹರೂ- ಗಾಂಧಿ ಪರಿವಾರದ ಗುಲಾಮರು, ಸಾಯೋವರೆಗೂ ಗುಲಾಮಗಿರಿ ಮಾಡುತ್ತೇವೆ'
ಸಭೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಮತ್ತು ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಲಾಯಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಪ್ರಮುಖ ನಾಯಕರಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಉಮೆನ್ ಚಾಂಡಿ, ಮುಕುಲ್ ವಾಸ್ನಿಕ್, ತಾರಿಕ್ ಅನ್ವರ್, ಸುರ್ಜೆವಾಲಾ, ಅಜಯ್ ಮಾಕನ್ ಮತ್ತು ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಸೇರಿದ್ದಾರೆ.
ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.