ದೆಹಲಿ: 75,800 ಕೋಟಿ ರೂ. ಬಜೆಟ್ ಮಂಡಿಸಿದ ಸಿಸೋಡಿಯ; 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಭರವಸೆ
ಕಳೆದ ವರ್ಷ ಸಿಸೋಡಿಯ ಅವರು 69,000 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರು. ಈ ಬಾರಿಯ ಬಜೆಟ್ ಅನ್ನು ಆಮ್ ಆದ್ಮಿ ಪಾರ್ಟಿ 'ರೋಜ್ ಗಾರ್ ಬಜೆಟ್' ಎಂದು ಕರೆದುಕೊಂಡಿದೆ.
Published: 26th March 2022 01:20 PM | Last Updated: 26th March 2022 01:50 PM | A+A A-

ಮನೀಶ್ ಸಿಸೋಡಿಯ
ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಶನಿವಾರ 75,800 ಕೋಟಿ ರೂ. ಮೌಲ್ಯದ ಬಜೆಟ್ ಅನ್ನು ಮಂಡಿಸಿದರು. 2022- 23ನೇ ಸಾಲಿನ ಈ ಬಜೆಟ್ ಕೊರೊನಾದಿಂದ ಕುಂಠಿತಗೊಂಡಿದ್ದ ಆರ್ಥಿಕತೆಗೆ ಪುನಶ್ಚೇತನ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭೋಪಾಲಿ ಅಂದ್ರೆ ಸಲಿಂಗಕಾಮಿ: ವಿವೇಕ್ ಅಗ್ನಿಹೋತ್ರಿ ಹೇಳಿಕೆಗೆ ಕಾಂಗ್ರೆಸ್ ಖಂಡನೆ
ಕಳೆದ ವರ್ಷ ಸಿಸೋಡಿಯ ಅವರು 69,000 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರು. ಈ ಬಾರಿಯ ಬಜೆಟ್ ಅನ್ನು ಆಮ್ ಆದ್ಮಿ ಪಾರ್ಟಿ 'ರೋಜ್ಗಾರ್ ಬಜೆಟ್' ಎಂದು ಕರೆದುಕೊಂಡಿದೆ. ಅಂದರೆ ಉದ್ಯೋಗ ಖಾತರಿ ನೀಡುವ ಬಜೆಟ್.
ಇದನ್ನೂ ಓದಿ: ಚೀನಾ ವಿದೇಶಾಂಗ ಸಚಿವರಿಗೆ ನಿರಾಸೆ: ಪ್ರಧಾನಿ ಮೋದಿ ಭೇಟಿ ಮಾಡಲು ‘ಸಾಧ್ಯವಿಲ್ಲ’; ನಯವಾಗಿಯೇ ನಿರಾಕರಿಸಿದ ಪಿಎಂ ಕಚೇರಿ!
ಪ್ರಸ್ತುತ ಮಂಡಿಸಿರುವ ಬಜೆಟ್ ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎನ್ನುವ ಭರವಸೆಯನ್ನು ಸಿಸೋಡಿಯ ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗುವಾಹಟಿ ವಿಮಾನ ನಿಲ್ದಾಣದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ತಪಾಸಣೆ ಮಾಡಿದ ಸಿಐಎಸ್ಎಫ್ ಮಹಿಳಾ ಪೇದೆ ಅಮಾನತು