ಉತ್ತರ ಪ್ರದೇಶದ ಸಚಿವ ಸಂಪುಟದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಚಿವರ ಸಂಖ್ಯೆ ಎಷ್ಟು ಗೊತ್ತೇ?
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 53 ಸಚಿವರ ಪೈಕಿ ಹಲವರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
Published: 27th March 2022 01:42 PM | Last Updated: 28th March 2022 02:30 PM | A+A A-

ಉತ್ತರ ಪ್ರದೇಶದ ನೂತನ ಸಚಿವರಾಗಿ ಜಿತಿನ್ ಪ್ರಸಾದ್ ಮತ್ತಿತರರು ಪ್ರಮಾಣ ವಚನ ಸ್ವೀಕಾರದ ಚಿತ್ರ
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 53 ಸಚಿವರ ಪೈಕಿ ಹಲವರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
53 ಮಂದಿ ಸಚಿವರ ಪೈಕಿ 45 ಮಂದಿ ಘೋಷಣೇ ಮಾಡಿಕೊಂಡಿರುವ ಪ್ರಮಾಣಪತ್ರಗಳ ವಿವರಗಳನ್ನು ಎಡಿಆರ್ ವಿಶ್ಲೇಷಿಸಿದ್ದು, 22 ಮಂದಿ ಕ್ರಿಮಿನಲ್ ಕೇಸ್ ಗಳನ್ನು ಹೊಂದಿದ್ದಾರೆ. ಈ ಪೈಕಿ ಹಲವರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ.
ಮುಖ್ಯಮಂತ್ರಿಗಳೂ ಸೇರಿ 45 ಸಚಿವರ ಸ್ವಯಂ ಘೋಷಿತ ಪ್ರಮಾಣಪತ್ರಗಳನ್ನು ಎಡಿಆರ್ ವಿಶ್ಲೇಷಿಸಿದೆ.
ಈ ವರದಿ ಪ್ರಕಟವಾಗುವವರೆಗೂ ಸಂಜಯ್ ನಿಶಾದ್ ಹಾಗೂ ಜಿತಿನ್ ಪ್ರಸಾದ್ ಅವರ ಪ್ರಮಾಣಪತ್ರಗಲು ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿರಲಿಲ್ಲ ಎಂದು ಎಡಿಆರ್ ತಿಳಿಸಿದೆ.
ಸಚಿವ ಸಂಪುಟದಲ್ಲಿರುವವರ ಪೈಕಿ ಶೇ.49 ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದು ಶೇ.44 ರಷ್ಟು ಸಚಿವರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
45 ಸಚಿವರ ಪೈಕಿ 39 ಸಚಿವರು (ಶೇ.87 ರಷ್ಟು) ಮಂದಿ ಕರೋಡ್ ಪತಿಗಳಾಗಿದ್ದು, ಸರಾಸರಿ 9 ಕೋಟಿಯಷ್ಟು ಮೌಲ್ಯದ ಆಸ್ತಿ ಹೊಂದಿದ್ದಾರೆ.
ಪ್ರಮಾಣಪತ್ರದ ಪ್ರಕಾರ ತಿಲೋಲಿ ಕ್ಷೇತ್ರದ ಮಯಾಂಕೇಶ್ವರ್ ಶರಣ್ ಸಿಂಗ್ ಅತಿ ಹೆಚ್ಚು ಆಸ್ತಿ ಮೌಲ್ಯ ಅಂದರೆ 58.07 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, ವಿಧಾನಪರಿಷತ್ ಸದಸ್ಯರಾಗಿರುವ ಧರಮ್ ವೀರ್ ಸಿಂಗ್ 42.91 ಲಕ್ಷ ಮೌಲ್ಯದ ಆಸ್ತಿಯೊಂದಿಗೆ ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಜನಪ್ರತಿನಿಧಿಯಾಗಿದ್ದಾರೆ.
27 ಸಚಿವರು ಸಾಲ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು, ಭೋಗಿನ್ಪುರದ ರಾಕೇಶ್ ಸಚನ್ 8.17 ಕೋಟಿ ರೂಪಾಯಿ ಸಾಲ ಹೊಂದಿದ್ದು ಅತಿ ಹೆಚ್ಚು ಸಾಲ ಹೊಂದಿರುವ ಜನಪ್ರತಿನಿಧಿಯಾಗಿದ್ದಾರೆ.