
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಂಗ್ಸ್ ಇಂಡಿಯಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಎರಡು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ: ಯುಗಾದಿ ಹಬ್ಬದ ಎಫೆಕ್ಟ್: ಹೆಚ್ಚುವರಿ 600 ಬಸ್ಗಳ ಓಡಿಸಲು ಕೆಎಸ್ಆರ್ ಟಿಸಿ ನಿರ್ಧಾರ!!
ದೇಶದ ಅತ್ಯುತ್ತಮ ಏರ್ ಪೋರ್ಟ್ ಮತ್ತು ವಿಮಾನಯಾನ ಸಂಶೋಧನಾ ಕೆಟಗರಿಗಳಲ್ಲಿ ಬೆಂಗಳೂರು ಪ್ರಶಸ್ತಿ ಗೆದ್ದುಕೊಂಡಿದೆ. ದೇಶದ ವಿಮಾನಯಾನ ಕ್ಷೇತ್ರದಲ್ಲಿ ಪ್ರತಿಷ್ಟಿತ ಪ್ರಶಸ್ತಿಯೆಂದು ಪರಿಗಣಿಸಲ್ಪಡುವ ವಿಂಗ್ಸ್ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿರುವುದಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಇಒ ಹರಿ ಮರಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊಲ್ಲೂರು ದೇವಸ್ಥಾನದಲ್ಲಿ 'ಸಲಾಂ ಮಂಗಳಾರತಿ' ನಿಲ್ಲಿಸುವಂತೆ ದೇವಸ್ಥಾನದ ಸಮಿತಿಗೆ ವಿಹೆಚ್ಪಿ ಒತ್ತಾಯ!
ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೈದರಾಬಾದಿನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಪ್ರಯಾಣಿಕರಿಗೆ ಯಾವುದೇ ಅಡಚಣೆ ಉಂಟಾಗದಂತೆ ಸೇವೆ ನೀಡಲು ಆಧುನಿಕ ಮಾರ್ಗಗಳನ್ನು ಅನುಸರಿಸಿರುವುದಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಕೆಲಸದಿಂದ ತೆಗೆದುಹಾಕಿದ್ದಕ್ಕೆ ದ್ವೇಷ; ಹೆಚ್ ಆರ್ ಕೊಲೆಗೆ ಸ್ಕೆಚ್ ಹಾಕಿದ್ದವರ ಬಂಧನ!