
ಏರ್ ಇಂಡಿಯಾ ವಿಮಾನದ ಸಾಂದರ್ಭಿಕ ಚಿತ್ರ
ನವದೆಹಲಿ: ನಿಗದಿತ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಭಾನುವಾರದಿಂದ ಪುನಾರಂಭಗೊಂಡಿದೆ ಎಂದು ಪ್ರಯಾಣಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಅಂತಾರಾಷ್ಟ್ರೀಯ ವಿಮಾನಸೇವೆಗಳು ಪುನಾರಂಭಗೊಳ್ಳುತ್ತಿರುವುದರಿಂದ ಭಾರತ ಜತ್ತಿನೊಂದಿಗೆ ಸಂಪರ್ಕ ಸಾಧಿಸುವುದಕ್ಕೆ ಸಾಧ್ಯವಾಗಲಿದೆ. ಬೇಸಿಗೆ ವೇಳಾಪಟ್ಟಿ-2022 ಯಲ್ಲಿ 135 ಹೊಸ ವಿಮಾನಗಳನ್ನು ಉದ್ಘಾಟಿಸಲಾಗಿದೆ.
ಗೋರಖ್ ಪುರ- ವಾರಣಾಸಿ ನಡುವಿನ ವಿಮಾನ ಸೇವೆಯನ್ನೂ ಉದ್ಘಾಟನೆ ಮಾಡಲಾಗಿದೆ ಎಂದು ಸಿಂಧಿಯಾ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಪ್ರಯಾಣಿಕ ವಿಮಾನಯಾನದ ಪ್ರಧಾನ ನಿರ್ದೇಶಕರು ಭಾರತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಪುನಾರಂಭಗೊಳಿಸಿದೆ ಎಂದು ಹೇಳಿದ್ದರು.