
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ಮುಂಬೈ: ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಮುಂಬೈನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭೋಪಾಲಿ ಎಂದರೆ ಸಲಿಂಗಕಾಮಿ ಎಂದು ಹೇಳುವ ಮೂಲಕ ಭೋಪಾಲಿಗಳನ್ನ ಅವಮಾನಿಸಿದ್ದಾರೆಂದು ಆರೋಪಿಸಿ ಪತ್ರಕರ್ತ ಕಮ್ ಸೆಲಬ್ರಿಟಿ ಪಬ್ಲಿಕ್ ರಿಲೇಷನ್ ಮ್ಯಾನೇಜರ್ ರೋಹಿತ್ ಪಾಂಡೆ ಅವರು ತಮ್ಮ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಮೂಲಕ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮಾನನಷ್ಟ ಮತ್ತು ಇತರ ಆರೋಪಗಳಿಗಾಗಿ ಎಫ್‌ಐಆರ್ ದಾಖಲಿಸಲು ಕೋರಿ ದೂರು ದಾಖಲಿಸಲಾಗಿದೆ.
ಕಾಶ್ಮೀರ್ ಫೈಲ್ಸ್ ನಿರ್ದೇಶಕ ಅಗ್ನಿಹೋತ್ರಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ''ಭೋಪಾಲಿಗಳು ಸ್ವ ಇಚ್ಚೆಯಿಂದ, ಉದ್ದೇಶಪೂರ್ವಕವಾಗಿ ಸಲಿಂಗಕಾಮಿಗಳು ಎಂದು ಕರೆಯುವ ಮೂಲಕ ಭೋಪಾಲಿಗರನ್ನು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿರ್ದೇಶಕ ಅಗ್ನಿಹೋತ್ರಿ ವಿರುದ್ಧ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಸೆಕ್ಷನ್ 153 ಎ ಮತ್ತು ಬಿ ಅಡಿಯಲ್ಲಿ ಎಫ್ ಐಆರ್ ದಾಖಲಿಸಲು ಕೋರಿದ್ದಾರೆ.
ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಲು ಶುಕ್ರವಾರ ಭೋಪಾಲ್ ಗೆ ಬೇಟಿ ನೀಡಿದ್ದ ವೇಳೆ ಅಗ್ನಿಹೋತ್ರಿ ಅವರು ಆನ್ ಲೈನ್ ಚಾನೆಲ್ ಗೆ ನೀಡಿದ ಸಂದರ್ಶನದ ವಿಡಿಯೋ ಕ್ಲಿಪ್ ವೈರಲ್ ಆಗಿತ್ತು.
ಮೂರು ವಾರಗಳ ಹಳೆಯದು ಎಂದು ಹೇಳಲಾದ ಕ್ಲಿಪ್ ನಲ್ಲಿ ಅಗ್ನಿಹೋತ್ರಿ ಮಾತನಾಡುತ್ತಾ, ನಾನು ಭೋಪಾಲ್ ನಲ್ಲಿ ಬೆಳೆದಿದ್ದೇನೆ. ಆದರೆ ನಾನು ಭೋಪಾಲಿ ಅಲ್ಲ. ಏಕೆಂದರೆ ಭೋಪಾಲಿಯು ವಿಭಿನ್ನ ಅರ್ಥವನ್ನು ಹೊಂದಿದೆ. ನೀವು ಯಾವುದೇ ಭೋಪಾಲಿಯನ್ನು ಕೇಳಬಹುದು, ನಾನು ಅದನ್ನು ಖಾಸಗಿಯಾಗಿ ವಿವರಿಸುತ್ತೇನೆ. ಯಾರಾದಾರೂ ಅವರು ಭೋಪಾಲಿ ಎಂದು ಹೇಳಿದರೆ, ಅವರು ಸಾಮಾನ್ಯವಾಗಿ ಸಲಿಂಗಕಾಮಿ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪತ್ರಕರ್ತ ಕಮ್ ಸೆಲಬ್ರಿಟಿ ಪಬ್ಲಿಕ್ ರಿಲೇಷನ್ ರೋಹಿತ್ ಪಾಂಡೆ ದೂರು ನೀಡಿದ್ದಾರೆ.