ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಬಳಿಕ ಪ್ರತಿಕಾಯಗಳಲ್ಲಿ ಏರಿಕೆ; ರಾಜ್ಯಸಭೆಯಲ್ಲಿ ಐಸಿಎಂಆರ್ ಅಧ್ಯಯನ ಉಲ್ಲೇಖ
ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಲಸಿಕೆಯ ಬಳಿಕ ಪ್ರತಿಕಾಯಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಐಸಿಎಂಆರ್ ಅಧ್ಯಯನ ವರದಿಯನ್ನು ಉಲ್ಲೇಖಿಸಿ ಆರೋಗ್ಯ ಖಾತೆ ರಾಜ್ಯ ಸಚಿವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
Published: 29th March 2022 05:19 PM | Last Updated: 29th March 2022 05:19 PM | A+A A-

ಬೂಸ್ಟರ್ ಡೋಸ್
ನವದೆಹಲಿ: ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಲಸಿಕೆಯ ಬಳಿಕ ಪ್ರತಿಕಾಯಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಐಸಿಎಂಆರ್ ಅಧ್ಯಯನ ವರದಿಯನ್ನು ಉಲ್ಲೇಖಿಸಿ ಆರೋಗ್ಯ ಖಾತೆ ರಾಜ್ಯ ಸಚಿವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಆಸ್ಟ್ರಾಜೆನಿಕಾ ಹಾಗೂ ಕೋವಿಶೀಲ್ಡ್ ನ ಬೂಸ್ಟರ್ ಡೋಸ್ ಗಳ ಬಗ್ಗೆ ಲಭ್ಯವಿರುವ ಅಂತಾರಾಷ್ಟ್ರೀಯ ಡೇಟಾ ಪ್ರಕಾರ ಬೂಸ್ಟರ್ ಡೋಸ್ ನೀಡಿದ ಬಳಿಕ ಪ್ರತಿಕಾಯಗಳ ಉತ್ಪತ್ತಿಯಲ್ಲಿ 3-4 ಪಟ್ಟು ಏರಿಕೆ ದಾಖಲಾಗಿದೆ ಎಂದು ಸಚಿವರಾದ ಭಾರತಿ ಪ್ರವೀಣ್ ಮಾಹಿತಿ ನೀಡಿದ್ದಾರೆ.
ಬೂಸ್ಟರ್ ಡೋಸ್ ಪರಿಣಾಮಗಳ ಬಗ್ಗೆ ಐಸಿಎಂಆರ್ ನಿಂದ ಅಧ್ಯಯನ ನಡೆಸಲಾಗಿದೆ. ಲಸಿಕೆ ನೀಡಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್ ಟಿಎಜಿಐ) ಆರೋಗ್ಯ ಕಾರ್ಯಕರ್ತರು, ಮುನ್ನೆಲೆ ಕಾರ್ಯಕರ್ತರು, 60 ವರ್ಷಕ್ಕಿಂತ ಮೇಲ್ಪಟ್ಟ ಮಂದಿಗೆ 2022 ರ ಜ.10 ರಿಂದ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಮಾ.24 ವರೆಗೂ 2.21 ಕೋಟಿ ಮುನ್ನೆಚ್ಚರಿಕಾ ಡೋಸ್ ಗಳನ್ನು ನೀಡಲಾಗಿದೆ ಎಂದು ಸಚಿವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.