ನವದೆಹಲಿ: 15 ಲಘು ಯುದ್ಧ ಹೆಲಿಕಾಪ್ಟರ್ ಖರೀದಿಗೆ ಭದ್ರತಾ ಸಂಪುಟ ಸಮಿತಿ ಅನುಮೋದನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಭದ್ರತಾ ಸಂಪುಟ ಸಮಿತಿ, ರೂ. 3, 887 ಕೋಟಿ ವೆಚ್ಚದಲ್ಲಿ ಸ್ವದೇಶಿ ನಿರ್ಮಿತ 15 ಲಘು ಯುದ್ಧ ಹೆಲಿಕಾಪ್ಟರ್ ಖರೀದಿಸಲು ಅನುಮೋದನೆ ನೀಡಿದೆ.
Published: 30th March 2022 08:38 PM | Last Updated: 31st March 2022 01:49 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಭದ್ರತಾ ಸಂಪುಟ ಸಮಿತಿ, ರೂ. 3, 887 ಕೋಟಿ ವೆಚ್ಚದಲ್ಲಿ ಸ್ವದೇಶಿ ನಿರ್ಮಿತ 15 ಲಘು ಯುದ್ಧ ಹೆಲಿಕಾಪ್ಟರ್ ಖರೀದಿಸಲು ಅನುಮೋದನೆ ನೀಡಿದೆ.
ಭಾರತೀಯ ವಾಯುಪಡೆಗಾಗಿ 10 ಹೆಲಿಕಾಪ್ಟರ್ ಹಾಗೂ ಭಾರತೀಯ ಸೇನೆಗೆ ಐದು ಹೆಲಿಕಾಪ್ಟರ್ ಖರೀದಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ರೂ. 377 ಕೋಟಿ ಮೊತ್ತದ ಮೂಲಸೌಕರ್ಯ ಅಭಿವೃದ್ಧಿಗೆ ಮಂಜೂರಾತಿಯೊಂದಿಗೆ ರೂ. 3,887 ಕೋಟಿ ವೆಚ್ಚದಲ್ಲಿ 15 ಲಘು ಯುದ್ಧ ಹೆಲಿಕಾಪ್ಟರ್ ಲಿಮಿಟೆಡ್ ಸರಣಿ ಉತ್ಪಾದನೆಯನ್ನು ಖರೀದಿಸಲು ಭದ್ರತೆ ಮೇಲಿನ ಸಂಪುಟ ಸಮಿತಿ ಅನುಮೋದಿಸಿದೆ ಎಂದು ಅದು ಹೇಳಿದೆ.
ಸುಮಾರು ಶೇಕಡ 45 ರಷ್ಟು ಸ್ವದೇಶಿ ಅಂಶದೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಲಘು ಯುದ್ಧ ಹೆಲಿಕಾಪ್ಟರ್ ಗಳು, ಶತ್ರು ರಾಷ್ಟ್ರಗಳ ವಾಯು ರಕ್ಷಣೆ ಮತ್ತು ಪ್ರತಿ ಬಂಡಾಯ ಕಾರ್ಯಾಚರಣೆಗಳ ನಾಶ, ಪತ್ತೆ ಮತ್ತು ರಕ್ಷಣೆ ಸೇರಿದಂತೆ ಅಗತ್ಯವಿರುವ ಚುರುಕುತನ, ಕುಶಲತೆ ಹೊಂದಿರುವುದಾಗಿ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.