ಈಶಾನ್ಯದ ದಶಕಗಳ ಬೇಡಿಕೆ ಕೊನೆಗೂ ಈಡೇರಿಸಿದ ಕೇಂದ್ರ; AFSPA ಪ್ರಕ್ಷುಬ್ದ ಪ್ರದೇಶಗಳು ಕಡಿತ

ಈಶಾನ್ಯ ರಾಜ್ಯಗಳ ದಶಕಗಳ ಕಾಲದ ಬೇಡಿಕೆಯನ್ನು ಕೊನೆಗೂ ಕೇಂದ್ರ ಸರ್ಕಾರ ಈಡೇರಿಸಿದ್ದು, AFSPA ನಿಯಮದಡಿಯಲ್ಲಿನ ಪ್ರಕ್ಷುಬ್ದ ಪ್ರದೇಶಗಳ ಸಂಖ್ಯೆಯನ್ನು ಕಡಿತ ಮಾಡಿದೆ.

Published: 31st March 2022 04:28 PM  |   Last Updated: 31st March 2022 05:00 PM   |  A+A-


AFSPA-MHA

ಸಂಗ್ರಹ ಚಿತ್ರ

PTI

ನವದೆಹಲಿ: ಈಶಾನ್ಯ ರಾಜ್ಯಗಳ ದಶಕಗಳ ಕಾಲದ ಬೇಡಿಕೆಯನ್ನು ಕೊನೆಗೂ ಕೇಂದ್ರ ಸರ್ಕಾರ ಈಡೇರಿಸಿದ್ದು, AFSPA ನಿಯಮದಡಿಯಲ್ಲಿನ ಪ್ರಕ್ಷುಬ್ದ ಪ್ರದೇಶಗಳ ಸಂಖ್ಯೆಯನ್ನು ಕಡಿತ ಮಾಡಿದೆ.

ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, 'ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಗೆ (ಆಫ್‌ಸ್ಪ) ಒಳಪಡುವ ಪ್ರದೇಶವನ್ನು ಕೇಂದ್ರ ಸರ್ಕಾರವು ಗುರುವಾರ ಕಡಿಮೆ ಮಾಡಿದೆ. ನಾಗಾಲ್ಯಾಂಡ್‌, ಅಸ್ಸಾಂ ಹಾಗೂ ಮಣಿಪುರದಲ್ಲಿ ಹಲವು ವರ್ಷಗಳ ಬಳಿಕ ಆಫ್‌ಸ್ಪ ನಿಯಂತ್ರಿತ ಪ್ರದೇಶವು ಕಡಿತಗೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ. 

'ಉತ್ತಮಗೊಂಡಿರುವ ಭದ್ರತಾ ಪರಿಸ್ಥಿತಿ, ಸತತ ಪ್ರಯತ್ನಗಳ ಫಲವಾಗಿ ವೇಗ ಪಡೆದಿರುವ ಅಭಿವೃದ್ಧಿ ಕಾರ್ಯಗಳು, ಬಂಡಾಯ ಶಮನಗೊಳಿಸಲು ನಡೆಸಿರುವ ಹಲವು ಒಪ್ಪಂದಗಳು ಹಾಗೂ ಈಶಾನ್ಯ ಭಾಗದಲ್ಲಿ ಮರೆಯಾಗಿರುವ ಶಾಂತಿಯನ್ನು ಮರಳಿ ತರಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಾಡಿರುವ ಪ್ರಯತ್ನಗಳ ಫಲವಾಗಿ ಆಫ್‌ಸ್ಪಗೆ ಒಳಪಟ್ಟಿರುವ ವಲಯ ಕಡಿತಗೊಂಡಿದೆ' ಎಂದು ಅಮಿತ್‌ ಶಾ ಟ್ವೀಟ್ ಮಾಡಿದ್ದಾರೆ.

ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ AFSPA ಅಡಿಯಲ್ಲಿ ಪ್ರದೇಶಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, AFSPA ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 1990 ರಿಂದ ಇಡೀ ಅಸ್ಸಾಂನಲ್ಲಿ ಅಸ್ತವ್ಯಸ್ತಗೊಂಡ ಪ್ರದೇಶದ ಅಧಿಸೂಚನೆ ಜಾರಿಯಲ್ಲಿದೆ. ಈ ಹೆಜ್ಜೆಯೊಂದಿಗೆ, ಅಸ್ಸಾಂನ 23 ಜಿಲ್ಲೆಗಳನ್ನು ಈಗ ಸಂಪೂರ್ಣವಾಗಿ ಮತ್ತು ಒಂದು ಜಿಲ್ಲೆಯನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ AFSPA ಪರಿಣಾಮದಿಂದ ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸೇನೆಯಿಂದ ನಾಗರಿಕರ ಹತ್ಯೆ; ನಾಗಾಲ್ಯಾಂಡ್‌ನಿಂದ ಎಎಫ್‌ಎಸ್‌ಪಿಎ ವಾಪಸ್​​, ಸಮಿತಿಗೆ ಒಪ್ಪಿಗೆ ನೀಡಿದ ಅಮಿತ್ ಶಾ

ಅಲ್ಲದೆ ಇಡೀ ಮಣಿಪುರದಲ್ಲಿ (ಇಂಫಾಲ್ ಮುನ್ಸಿಪಾಲಿಟಿ ಪ್ರದೇಶವನ್ನು ಹೊರತುಪಡಿಸಿ) ಡಿಸ್ಟರ್ಬ್ಡ್ ಏರಿಯಾ (ಪ್ರಕ್ಷುಬ್ದ ಪ್ರದೇಶ) ಘೋಷಣೆಯು 2004 ರಿಂದ ಜಾರಿಯಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಂಡ ಅಧಿಕಾರಿಗಳು, ಆರು ಜಿಲ್ಲೆಗಳ 15 ಪೊಲೀಸ್ ಠಾಣೆ ಪ್ರದೇಶಗಳನ್ನು ತೊಂದರೆಗೊಳಗಾದ ಪ್ರದೇಶದ ಅಧಿಸೂಚನೆಯಿಂದ ಹೊರಗಿಡಲಾಗಿದೆ. 1995 ರಿಂದ ಇಡೀ ನಾಗಾಲ್ಯಾಂಡ್‌ನಲ್ಲಿ ತೊಂದರೆಗೊಳಗಾದ ಪ್ರದೇಶ ಅಧಿಸೂಚನೆ ಜಾರಿಯಲ್ಲಿದೆ. ಹಂತ ಹಂತವಾಗಿ AFSPA ಅನ್ನು ತೆಗೆದುಹಾಕಲು ಈ ನಿಟ್ಟಿನಲ್ಲಿ ರಚಿಸಲಾದ ಸಮಿತಿಯ ಶಿಫಾರಸನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ನಾಗಾಲ್ಯಾಂಡ್‌ನ ಏಳು ಜಿಲ್ಲೆಗಳ 15 ಪೊಲೀಸ್ ಠಾಣೆಗಳಿಂದ ತೊಂದರೆಗೊಳಗಾದ ಪ್ರದೇಶದ ಅಧಿಸೂಚನೆಯನ್ನು ತೆಗೆದುಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು AFSPA ನಿಯಮ?
ಆಂಗ್ಲರ ವಿರುದ್ಧ ದೇಶದಲ್ಲಿ ನಡೆಯುತ್ತಿದ್ದ ಕ್ವಿಟ್‌ ಇಂಡಿಯಾ ಚಳವಳಿಯನ್ನು ಹತ್ತಿಕ್ಕಲು ಬ್ರಿಟಿಷ್‌ ಆಡಳಿತವು 1942ರಲ್ಲಿ ಆಫ್‌ಸ್ಪ ಜಾರಿಗೊಳಿಸಿತ್ತು. ಭಾರತ ಸ್ವಾತಂತ್ರ್ಯ ಪಡೆದ ನಂತರವೂ ಆಫ್‌ಸ್ಪ ಉಳಿಸಿಕೊಳ್ಳಲಾಯಿತು ಹಾಗೂ 1958ರಲ್ಲಿ ಇದನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿಯಂತ್ರಿಸಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಶಸ್ತ್ರ ಪಡೆಗಳನ್ನು ಬಳಸಿಕೊಳ್ಳಲು 'ಆಫ್‌ಸ್ಪ' ಅಡಿಯಲ್ಲಿ ಅವಕಾಶ ಸಿಗುತ್ತದೆ. ಪಡೆಗಳ ಗುಂಡಿಗೆ ಹಲವು ಮುಗ್ಧ ನಾಗರಿಕರು ಬಲಿಯಾಗಿದ್ದು, ಸೇನೆಗೆ ವಿಶೇಷಾಧಿಕಾರವನ್ನು ನೀಡುವ 'ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ–1958' ಅನ್ನು ರದ್ದುಪಡಿಸಬೇಕು ಎಂದು ಈ ಹಿಂದೆ ಹಲವು ಬಾರಿ ಜನರು ರಸ್ತೆಗಳಿದು ಹೋರಾಟ ನಡೆಸಿದ್ದರು. 


Stay up to date on all the latest ರಾಷ್ಟ್ರೀಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp