ಧಾರ್ಮಿಕ ವಿಭಜನೆ ತಡೆಯಿರಿ, ಕೋಮುವಾದ ನಿಲ್ಲಿಸಿ: ಸಿಎಂ ಬೊಮ್ಮಾಯಿಗೆ ಕಿರಣ್ ಮಜುಂದಾರ್ ಶಾ ಮನವಿ
ಕರ್ನಾಟಕದ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ದೂರವಿಡುವ ಹಿಂದುತ್ವ ಸಂಘಟನೆಗಳ ಪ್ರಯತ್ನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಬಯೋಕಾನ್ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಕಿರಣ್ ಮಜುಂದಾರ್-ಶಾ...
Published: 31st March 2022 04:01 PM | Last Updated: 31st March 2022 04:01 PM | A+A A-

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ
ನವದೆಹಲಿ: ಕರ್ನಾಟಕದ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ದೂರವಿಡುವ ಹಿಂದುತ್ವ ಸಂಘಟನೆಗಳ ಪ್ರಯತ್ನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಬಯೋಕಾನ್ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಕಿರಣ್ ಮಜುಂದಾರ್-ಶಾ ಅವರು, ಆದಷ್ಟು ಬೇಗ ಈ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಬೆಳೆಯುತ್ತಿರುವ ಧಾರ್ಮಿಕ ವಿಭಜನೆ ಕುರಿತು ಆತಂಕ ವ್ಯಕ್ತಪಡಿಸಿದ ಕಿರಣ್ ಮಜುಂದಾರ್-ಶಾ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೋಮುವಾದ ಬೆಳೆದರೆ ದೇಶದ “ಜಾಗತಿಕ ನಾಯಕತ್ವವನ್ನು” ನಾಶ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನು ಓದಿ: ಹಲಾಲ್ ವಿರೋಧಿಸಿ.. ಜಟ್ಕಾ ಜಮಾಯಿಸಿ.: ರಾಜ್ಯಾದ್ಯಂತ ಹಲಾಲ್ ಬಾಯ್ಕಟ್ ಅಭಿಯಾನ ತೀವ್ರ
“ಕರ್ನಾಟಕ ಯಾವಾಗಲೂ ಅಂತರ್ಗತ ಆರ್ಥಿಕ ಅಭಿವೃದ್ಧಿಯನ್ನು ರೂಪಿಸಿದೆ. ಹಾಗಾಗಿ ಕೋಮುವಾದವನ್ನು ನಾವು ಅನುಮತಿಸಬಾರದು. ಐಟಿ/ಬಿಟಿ ಕೋಮುವಾದ ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ” ಎಂದು ಏಷ್ಯಾದ ಪ್ರಮುಖ ಜೈವಿಕ ಔಷಧೀಯ ಉದ್ಯಮದ ಮುಖ್ಯಸ್ಥರಾದ ಶಾ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡಿ”ದಯವಿಟ್ಟು ಈ ಬೆಳೆಯುತ್ತಿರುವ ಧಾರ್ಮಿಕ ವಿಭಜನೆಯನ್ನು ಪರಿಹರಿಸಿ” ಎಂದು ಮನವಿ ಮಾಡಿಕೊಂಡಿದ್ದಾರೆ.
‘ಕರ್ನಾಟಕವು ಎಲ್ಲ ಸಮುದಾಯದವರನ್ನು ಒಳಗೊಂಡಿರುವ ಆರ್ಥಿಕ ಅಭಿವೃದ್ಧಿಯನ್ನು ರೂಪಿಸಿದೆ. ಇಲ್ಲಿ ಕೋಮುವಾದಕ್ಕೆ ಅವಕಾಶ ನೀಡಬಾರದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ’ ಎಂದು ಶಾ ಆಗ್ರಹಿಸಿದ್ದಾರೆ.