ಈ ಕೆಲಸ ಮಾಡದಿದ್ದರೆ, ಗುಜರಾತ್ ನಿಂದ ಹೊರ ಹಾಕಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್!!
ಗುಜರಾತ್ ನ ಶಾಲೆಗಳನ್ನು ದೇಶದಲ್ಲಿಯೇ ಮಾದರಿ ಶಾಲೆಗಳನ್ನಾಗಿ ಮಾಡದಿದ್ದರೆ ಗುಜರಾತ್ ನಿಂದ ನಮ್ಮನ್ನು ಹೊರ ಹಾಕಿ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
Published: 01st May 2022 04:04 PM | Last Updated: 01st May 2022 04:04 PM | A+A A-

ಅರವಿಂದ್ ಕೇಜ್ರಿವಾಲ್
ಭರೂಚ್: ಗುಜರಾತ್ ನ ಶಾಲೆಗಳನ್ನು ದೇಶದಲ್ಲಿಯೇ ಮಾದರಿ ಶಾಲೆಗಳನ್ನಾಗಿ ಮಾಡದಿದ್ದರೆ ಗುಜರಾತ್ ನಿಂದ ನಮ್ಮನ್ನು ಹೊರ ಹಾಕಿ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ಗುಜರಾತ್ನಲ್ಲಿ ಬದಲಾವಣೆ ತರುವ ವಿಷಯವಾಗಿ ಮತ್ತೊಮ್ಮೆ ಗುಡುಗಿದ್ದು, ದೆಹಲಿ ಮತ್ತು ಇತ್ತೀಚೆಗೆ ಪಂಜಾಬ್ನಲ್ಲಿ ಯಶಸ್ವಿಯಾದ ಆಡಳಿತ ಮಾದರಿಯನ್ನು ಗುಜರಾತ್ ನಲ್ಲಿ ತರುವುದಾಗಿ ಹೇಳಿದ್ದಾರೆ.
बदलाव की तरफ़ उम्मीद से देख रहे गर्वभूमि गुजरात के भरुच ज़िले में 'आदिवासी संकल्प महासम्मेलन' | LIVE https://t.co/MJsnLK8gOn
— Arvind Kejriwal (@ArvindKejriwal) May 1, 2022
ಗುಜರಾತ್ನ ಭರೂಚ್ನಲ್ಲಿರುವ ಶಾಲೆಗಳನ್ನು ಉಲ್ಲೇಖಿಸಿ ,ಗುಜರಾತ್ನ ಶಾಲೆಗಳ ಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ. ಗುಜರಾತ್ನಲ್ಲಿ 6,000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇನ್ನೂ ಹಲವು ಶಿಥಿಲಾವಸ್ಥೆಯಲ್ಲಿವೆ. ಲಕ್ಷ ಲಕ್ಷ ಮಕ್ಕಳ ಭವಿಷ್ಯ ಅಸ್ತವ್ಯಸ್ತಗೊಂಡಿದೆ. ನಾವು ದೆಹಲಿಯಲ್ಲಿ ಶಾಲೆಗಳನ್ನು ಬದಲಾಯಿಸಿದ ರೀತಿ ಇಲ್ಲಿನ ಮಕ್ಕಳ ಭವಿಷ್ಯವನ್ನು ಬದಲಾಯಿಸಬಹುದು” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇದೇ ವೇಳೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಆಡಳಿತದ ವಿರುದ್ಧ ಭಾರೀ ವಾಗ್ದಾಳಿ ಮಾಡಿದ ಅವರು, 'ಗುಜರಾತ್ನಲ್ಲಿ ಪರೀಕ್ಷೆ ವೇಳೆ ಪೇಪರ್ ಸೋರಿಕೆಯಲ್ಲಿ ಬಿಜೆಪಿ ವಿಶ್ವದಾಖಲೆ ಮಾಡುತ್ತಿದೆ. ಪೇಪರ್ ಸೋರಿಕೆಯಾಗದಂತೆ ಕನಿಷ್ಠ ಒಂದು ಪರೀಕ್ಷೆಯನ್ನಾದರೂ ನಡೆಸುವಂತೆ ನಾನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಗುಜರಾತ್ ನಲ್ಲಿ ನಮಗೆ ಒಂದು ಅವಕಾಶ ನೀಡಿ, ನಾನು ಈ ಅವಕಾಶದಲ್ಲಿ ಶಾಲೆಗಳನ್ನು ಸುಧಾರಿಸದಿದ್ದರೆ ನೀವು ನನ್ನನ್ನು ಹೊರಹಾಕಬಹುದು ಎಂದು ಹೇಳಿ, ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನ ಗೆಲ್ಲಿಸುವಂತೆ ಕೇಜ್ರಿವಾಲ್ ಮತ್ತೊಮ್ಮೆ ಗುಜರಾತ್ ಜನತೆಯಲ್ಲಿ ಮನವಿ ಮಾಡಿದರು.