ಖಲೀಸ್ಥಾನ ಪರ ಟ್ವೀಟ್ ಮಾಡಿದ್ದ ನಾಯಕನನ್ನು ಉಚ್ಛಾಟಿಸಿದ ಆಮ್ ಆದ್ಮಿ ಪಕ್ಷ
ಖಲೀಸ್ಥಾನ ಪರ ಟ್ವೀಟ್ ಮಾಡಿದ್ದ ಆಮ್ ಆದ್ಮಿ ಪಕ್ಷದ ನಾಯಕನನ್ನು ಪಕ್ಷ ಉಚ್ಛಾಟಿಸಿದೆ. ಹಿಮಾಚಲ ಪ್ರದೇಶದ ಸಾಮಾಜಿಕ ಜಾಲತಾಣ ಉಸ್ತುವಾರು ಹರ್ಪ್ರೀತ್ ಸಿಂಗ್ ಬೇಡಿ ಉಚ್ಚಾಟನೆಗೊಂಡಿರುವ ನಾಯಕನಾಗಿದ್ದಾನೆ.
Published: 02nd May 2022 08:12 PM | Last Updated: 03rd May 2022 01:11 PM | A+A A-

ಎಎಪಿ ಸಾಂದರ್ಭಿಕ ಚಿತ್ರ
ಶಿಮ್ಲಾ:ಖಲೀಸ್ಥಾನ ಪರ ಟ್ವೀಟ್ ಮಾಡಿದ್ದ ಆಮ್ ಆದ್ಮಿ ಪಕ್ಷದ ನಾಯಕನನ್ನು ಪಕ್ಷ ಉಚ್ಛಾಟಿಸಿದೆ. ಹಿಮಾಚಲ ಪ್ರದೇಶದ ಸಾಮಾಜಿಕ ಜಾಲತಾಣ ಉಸ್ತುವಾರು ಹರ್ಪ್ರೀತ್ ಸಿಂಗ್ ಬೇಡಿ ಉಚ್ಚಾಟನೆಗೊಂಡಿರುವ ನಾಯಕನಾಗಿದ್ದಾನೆ.
ಬಿಜೆಪಿ ಬೇಡಿ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಈ ಕ್ರಮ ಕೈಗೊಂಡಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ಬೇಡಿ ಖಲೀಸ್ಥಾನವನ್ನು ಬೆಂಬಲಿಸಿ ಸರಣಿ ಟ್ವೀಟ್ ಮಾಡಿದ್ದರು ಎಂದು ಹೇಳಿತ್ತು.
ಈ ಬಗ್ಗೆ ಆಮ್ ಆದ್ಮಿ ಪಕ್ಷದ ವಿಭಾಗ ಸ್ಪಷ್ಟನೆ ನೀಡಿದ್ದು, ಹರ್ಪ್ರೀತ್ ಸಿಂಗ್ ಬೇಡಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಆಮ್ ಆದ್ಮಿ ಪಕ್ಷದ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾಗಿದ್ದು ಪಕ್ಷದ ನಿಲುವು, ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದೆ.
ಪಕ್ಷದ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡ ಹರ್ಪ್ರೀತ್ ಸಿಂಗ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊರಹಾಕಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದ ಒಗ್ಗಟ್ಟು ಸಮಗ್ರತೆಯನ್ನು ಆಮ್ ಆದ್ಮಿ ಪಕ್ಷ ನಂಬುತ್ತದೆ, ದೇಶದ ವಿರುದ್ಧ ಯಾರು ಏನೇ ಬರೆದರೂ ಅದನ್ನು ಸಹಿಸುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. 2012 ಹಾಗೂ 2020 ರಲ್ಲಿ ಬೇಡಿ ಖಲಿಸ್ಥಾನ ಪರವಾದ ಟ್ವೀಟ್ ಗಳನ್ನು ಮಾಡಿದ್ದರು ಹಾಗೂ ಪ್ರತ್ಯೇಕತಾವಾದದ ಗುಂಪಿಗೆ ಹೊಸ ಕರೆನ್ಸಿಗೆ ಬೇಡಿಕೆ ಇಟ್ಟಿದ್ದರು.