ಪ್ರಧಾನಿ ಕಚೇರಿಯಿಂದಲೇ ನನ್ನ ಬಂಧನಕ್ಕೆ ಷಡ್ಯಂತ್ರ: ಶಾಸಕ ಜಿಗ್ನೇಶ್ ಮೇವಾನಿ ಗಂಭೀರ ಆರೋಪ

ಪ್ರಧಾನಿ ಕಚೇರಿಯಿಂದಲೇ ನನ್ನ ಬಂಧನಕ್ಕೆ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಗಂಭೀರ ಆರೋಪ ಮಾಡಿದ್ದಾರೆ.

Published: 02nd May 2022 03:52 PM  |   Last Updated: 02nd May 2022 05:13 PM   |  A+A-


Jignesh-Mevani

ಶಾಸಕ ಜಿಗ್ನೇಶ್ ಮೇವಾನಿ ಸುದ್ದಿಗೋಷ್ಟಿ

PTI

ನವದೆಹಲಿ: ಪ್ರಧಾನಿ ಕಚೇರಿಯಿಂದಲೇ ನನ್ನ ಬಂಧನಕ್ಕೆ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಗಂಭೀರ ಆರೋಪ ಮಾಡಿದ್ದಾರೆ.

ಅಸ್ಸಾಂನಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದು ಬಿಡುಗಡೆಯಾದ ನಂತರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಗ್ನೇಶ್ ಮೇವಾನಿ, ನನ್ನ ಬಂಧನಕ್ಕೆ ಪ್ರಧಾನಿ ಕಚೇರಿಯಿಂದಲೇ ಷಡ್ಯಂತ್ರ ರೂಪಿಸಲಾಗಿದೆ. ಇದು ನನ್ನನ್ನು ನಾಶಮಾಡಲು ಪೂರ್ವ ಯೋಜಿತ ಸಂಚು. ಅವರು ನನ್ನನ್ನು ಕರೆದೊಯ್ದಾಗ ಪ್ರಕರಣದ ವಿವರಗಳನ್ನು ನೀಡಲಿಲ್ಲ. ನಾನು ವಕೀಲ ಮತ್ತು ಶಾಸಕ. ಅವರು ನನ್ನ ವಿರುದ್ಧ ಬಳಸಲಾದ ಸೆಕ್ಷನ್‌ಗಳನ್ನು ಅವರು ನನಗೆ ಹೇಳಲಿಲ್ಲ ಮತ್ತು ನನ್ನ ಹೆತ್ತವರೊಂದಿಗೆ ಮಾತನಾಡಲು ಬಿಡಲಿಲ್ಲ. ನನ್ನ ವಕೀಲರೊಂದಿಗೆ ಮಾತನಾಡಲೂ ಸಹ ನನಗೆ ಅವಕಾಶ ನೀಡಲಿಲ್ಲ ಎಂದು ಮೇವಾನಿ ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲೆ: ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು ಮಂಜೂರು, ನಾಳೆ ಬಿಡುಗಡೆ ಸಾಧ್ಯತೆ!

ಅಲ್ಲದೆ ತಮ್ಮ ಬಂಧನದ ವೇಳೆ ಶಾಸಕರ ಪ್ರೋಟೋಕಾಲ್ ಅನ್ನು ನಿರ್ಲಕ್ಷಿಸಲಾಯಿತು. ಈ ಬಗ್ಗೆ ಗುಜರಾತ್ ವಿಧಾನಸಭಾ ಸ್ಪೀಕರ್ ಅವರಿಗೂ ಮಾಹಿತಿ ನೀಡಿಲ್ಲ. ಅಸ್ಸಾಂನಲ್ಲಿದ್ದಾಗಲೇ ಈ ವಿಷಯ ತಿಳಿಯಿತು. ನಂತರ, ಅವರು ಮಹಿಳೆಗೆ ಸಂಬಂಧಪಟ್ಟ ಮತ್ತೊಂದು ಪ್ರಕರಣ ದಾಖಲಿಸಿದರು. ಇದು 56 ಇಂಚಿನ ಎದೆಯಲ್ಲಿನ ಭಯವನ್ನುಬಿಂಬಿಸುತ್ತದೆ ಎಂದು ನೇರವಾಗಿ ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮೇವಾನಿ ವಾಗ್ದಾಳಿ ನಡೆಸಿದರು.

'2,500 ಕಿಮೀ ದೂರದಲ್ಲಿರುವ ಶಾಸಕರೊಬ್ಬರ ಮೇಲೆ ಮಹಿಳೆಗೆ ಸಂಬಂಧಿಸಿ ಸುಳ್ಳು ಪ್ರಕರಣ ದಾಖಲಿಸುವುದು ಹೇಗೆ? ಎಂದು ಪ್ರಶ್ನಿಸಿದ ಮೇವಾನಿ, ನನ್ನ ಬಂಧನದ ಹಿಂದೆ ಪಿಎಂಒದಲ್ಲಿ ಕುಳಿತಿರುವ ಕೆಲವು ಗೋಡ್ಸೆ ಭಕ್ತರು ಇದ್ದಾರೆ ಎಂದು ಹೇಳಿದರು.

ತನಗೆ ಜಾಮೀನು ನೀಡಿದ ಅಸ್ಸಾಂ ನ್ಯಾಯಾಲಯವನ್ನು ಉಲ್ಲೇಖಿಸಿ ಮಾತನಾಡಿ ಮೇವಾನಿ “ಎರಡನೇ ಪ್ರಕರಣದಲ್ಲಿ ತ್ವರಿತ ಎಫ್‌ಐಆರ್ ತಯಾರಿಸಲಾಗಿದೆ ಎಂದು ತೋರುತ್ತದೆ. ಈ ಎಫ್‌ಐಆರ್ ನಿರ್ವಹಿಸುವಂತಿಲ್ಲ. ಯಾವುದೇ ವ್ಯಕ್ತಿ ಎಂದಿಗೂ ಇತರ ಪುರುಷ ಅಧಿಕಾರಿಗಳು ಇರುವಾಗ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾರ. ನನ್ನನ್ನು ಹೆಚ್ಚು ಕಾಲ ಕಸ್ಟಡಿಯಲ್ಲಿಡಲು ಪ್ರಕರಣವನ್ನು ಸಿದ್ಧಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ ಎಂದು ಮೇವಾನಿ ಹೇಳಿದರು.  ಅಲ್ಲದೆ ಗುಜರಾತ್‌ ಚುನಾವಣೆಗೆ ಸಜ್ಜಾಗುತ್ತಿದ್ದು, ಇದೇ ಕಾರಣಕ್ಕೆ ನನ್ನ ವಿರುದ್ಧ ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು. 

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಪೋಸ್ಟ್: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು

ಕಳೆದ ವಾರ ಸ್ಥಳೀಯ ನ್ಯಾಯಾಲಯವು ಕಾಂಗ್ರೆಸ್ ನಾಯಕನಿಗೆ ಜಾಮೀನು ನೀಡಿತ್ತು. ಏಪ್ರಿಲ್ 20 ರಂದು ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ಗಳಿಗಾಗಿ ಅವರನ್ನು ಬಂಧಿಸಲಾಗಿತ್ತು. ಇದಾದ ನಂತರ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಏಪ್ರಿಲ್ 25 ರಂದು ಮತ್ತೆ ಬಂಧಿಸಲಾಗಿತ್ತು. 
 


Stay up to date on all the latest ರಾಷ್ಟ್ರೀಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp