
ರಾಹುಲ್ ಗಾಂಧಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರದ್ದು ಕಳಪೆ ಆಡಳಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿನ ವಿದ್ಯುತ್ ಬಿಕ್ಕಟ್ಟು ಸೇರಿದಂತೆ ಉದ್ಯೋಗ, ರೈತರು ಮತ್ತು ಹಣದುಬ್ಬರ ಬಿಕ್ಕಟ್ಟು ಕುರಿತಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ 8 ವರ್ಷಗಳ ದುರಾಡಳಿತವು ಒಂದು ಕಾಲದಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದನ್ನು ಹೇಗೆ ಹಾಳುಮಾಡುವುದು ಎಂಬುದರ ಒಂದು ಅಧ್ಯಯನವಾಗಿದೆ ಎಂದಿದ್ದಾರೆ.
Power Crisis
— Rahul Gandhi (@RahulGandhi) May 2, 2022
Jobs Crisis
Farmer Crisis
Inflation Crisis
PM Modi’s 8-years of misgovernance is a case study on how to ruin what was once one of the world’s fastest growing economies.
ಪ್ರಸ್ತುತ ದೇಶದಲ್ಲಿನ ವಿದ್ಯುತ್ ಬಿಕ್ಕಟ್ಟಿನ ನಡುವೆ, ಮೋದಿ ಸರ್ಕಾರ ದ್ವೇಷದ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಿ, ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಚಾಲನೆ ನೀಡಬೇಕು ಎಂದು ಕಳೆದ ಶುಕ್ರವಾರ ರಾಹುಲ್ ಗಾಂಧಿ ಒತ್ತಾಯಿಸಿದ್ದರು.
ಇದನ್ನೂ ಓದಿ: ದ್ವೇಷದ ಬುಲ್ಡೋಜರ್ ನಿಲ್ಲಿಸಿ, ಬದಲಿಗೆ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಿ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ
ದೇಶದಲ್ಲಿ ಕಲ್ಲಿದ್ದಲು ಮತ್ತು ವಿದ್ಯುತ್ ಬಿಕ್ಕಟ್ಟು ತೀವ್ರವಾಗಿರುವುದರಿಂದ ದೇಶ ಹಾಗೂ ಜನರ ಬಗೆಗಿನ ಕಾಳಜಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರಧಾನಿ ಹೇಳಬೇಕು ಎಂದಿದ್ದರು.