ಭಾರತದಲ್ಲಿ ಕೊರೋನಾ ಒಮಿಕ್ರಾನ್ XE ರೂಪಾಂತರಿಯ ಮೊದಲ ಪ್ರಕರಣ ಪತ್ತೆ
ದೇಶದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಭಾರತದಲ್ಲಿ ಒಮಿಕ್ರಾನ್ ಎಕ್ಸ್ ಇ ರೂಪಾಂತರಿಯ ಮೊದಲ ಪ್ರಕರಣ ಪತ್ತೆಯಾಗಿದೆ ಮತ್ತು ಇದು ಒಮಿಕ್ರಾನ್ ಗಿಂತ ಶೇ. 10 ಹೆಚ್ಚು ಹರಡುತ್ತದೆ ಎಂದು ಐಎನ್ಎಸ್ಎಸಿಒಜಿ...
Published: 03rd May 2022 04:59 PM | Last Updated: 03rd May 2022 04:59 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಭಾರತದಲ್ಲಿ ಒಮಿಕ್ರಾನ್ ಎಕ್ಸ್ ಇ ರೂಪಾಂತರಿಯ ಮೊದಲ ಪ್ರಕರಣ ಪತ್ತೆಯಾಗಿದೆ ಮತ್ತು ಇದು ಒಮಿಕ್ರಾನ್ ಗಿಂತ ಶೇ. 10 ಹೆಚ್ಚು ಹರಡುತ್ತದೆ ಎಂದು ಐಎನ್ಎಸ್ಎಸಿಒಜಿ (ಇಂಡಿಯಾ ಸಾರ್ಸ್ ಕೋವ್ –2 ಜೆನೋಮಿಕ್ ಕನ್ಸೋರ್ಟಿಯಂ) ದೃಢಪಡಿಸಿದೆ.
ಇದು ಓಮಿಕ್ರಾನ್ ನ BA.1 ಮತ್ತು BA.2 ಉಪ ವಂಶಾವಳಿಗಳ ಮರುಸಂಯೋಜಕವಾಗಿದ್ದು, ಮಹಾರಾಷ್ಟ್ರ, ಗುಜರಾತ್ ಮತ್ತು ಕೇರಳದಲ್ಲಿ ಒಮಿಕ್ರಾನ್ ಎಕ್ಸ್ ಇ ಪ್ರಕರಣ ವರದಿಯಾಗಿದೆ ಎಂದು ಐಎನ್ಎಸ್ಎಸಿಒಜಿ ಹೇಳಿದೆ. ಈ ಹೊಸ ರೂಪಾಂತರಿ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನು ಓದಿ: ಗುಜರಾತ್ ನಲ್ಲಿ ಎಕ್ಸ್ ಇ ಕೊರೋನಾ ರೂಪಾಂತರಿ ವೈರಸ್ ಪತ್ತೆ: ಪ್ರಯೋಗಾಲಯಕ್ಕೆ ಮಾದರಿ ರವಾನೆ
ಏಪ್ರಿಲ್ 25 ರ ಬುಲೆಟಿನ್ ನಲ್ಲಿ, ಭಾರತದಲ್ಲಿ ಒಂದು XE ರೂಪಾಂತರಿ ವರದಿಯಾಗಿದೆ ಎಂದು ಐಎನ್ಎಸ್ಎಸಿಒಜಿ ಹೇಳಿದೆ. ಆದಾಗ್ಯೂ ಈ ಮರುಸಂಯೋಜಕ ರೂಪಾಂತರಿ ಯಾವ ರಾಜ್ಯದಿಂದ ವರದಿಯಾಗಿದೆ ಎಂಬುದರ ಬಗ್ಗೆ ನಿರ್ದಿಷ್ಟವಾಗಿ ಹೇಳಿಲ್ಲ.
ಈ ಹಿಂದೆ ಮಹಾರಾಷ್ಟ್ರ ಮತ್ತು ಗುಜಾರಾತ್ ನಲ್ಲಿ ಎಕ್ಸ್ ಇ ರೂಪಾಂತರಿ ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಆದರೆ INSACOG ಪ್ರಯೋಗಾಲಯ ಇದನ್ನು ದೃಢಪಡಿಸಿರಲಿಲ್ಲ.