ದೆಹಲಿ ವಿಮಾನ ನಿಲ್ದಾಣ ಅತಿಹೆಚ್ಚು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ವಿಶ್ವದ 2ನೇ ಏರ್ಪೋರ್ಟ್!
ದೆಹಲಿಯ ಇಂದಿರಾಗಾಂದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಾರ್ಚ್ನಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅತಿಹೆಚ್ಚು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ವಿಶ್ವದ ಎರಡನೇ ವಿಮಾನ ನಿಲ್ದಾಣವಾಗಿದೆ.
Published: 03rd May 2022 11:53 AM | Last Updated: 03rd May 2022 01:16 PM | A+A A-

ದೆಹಲಿ ವಿಮಾನ ನಿಲ್ದಾಣ
ನವದೆಹಲಿ: ದೆಹಲಿಯ ಇಂದಿರಾಗಾಂದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಾರ್ಚ್ನಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅತಿಹೆಚ್ಚು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ವಿಶ್ವದ ಎರಡನೇ ವಿಮಾನ ನಿಲ್ದಾಣವಾಗಿದೆ ಎಂದು ಜಾಗತಿಕ ಟ್ರಾವೆಲ್ ಡೇಟಾ ಪೂರೈಕೆದಾರ ಅಧಿಕೃತ ಏರ್ಲೈನ್ ಗೈಡ್ (OAG) ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಮೊದಲ ಸ್ಥಾನದಲ್ಲಿ ಅಟ್ಲಾಂಟಾ ವಿಮಾನ ನಿಲ್ದಾಣ ಇದ್ದರೆ, ಕಳೆದ ವರ್ಷ ಎರಡನೇ ಸ್ಥಾನದಲ್ಲಿ ದುಬೈ ವಿಮಾನ ನಿಲ್ದಾಣ ಈ ವರ್ಷ ಮೂರನೇ ಸ್ಥಾನಕ್ಕೆ ಬಂದಿದೆ. ದೆಹಲಿ ಎರಡನೇ ಸ್ಥಾನವನ್ನು ಅತಿಕ್ರಮಿಸಿಕೊಂಡಿದೆ. ಕೊರೋನಾಕ್ಕಿಂತ ಮೊದಲು ದೆಹಲಿ ವಿಮಾನ ನಿಲ್ದಾಣವು ಮಾರ್ಚ್ 2019ರಲ್ಲಿ 23ನೇ ಸ್ಥಾನದಲ್ಲಿತ್ತು ಎಂದು ತಿಳಿದು ಬಂದಿದೆ.
ಈ ವರ್ಷದ ಮಾರ್ಚ್ನಲ್ಲಿ, ಯುಎಸ್ನ ಅಟ್ಲಾಂಟಾ, ಭಾರತದ ದೆಹಲಿ ಮತ್ತು ಯುಎಇಯ ದುಬೈನಲ್ಲಿನ ವಿಮಾನ ನಿಲ್ದಾಣಗಳು 4.42 ಮಿಲಿಯನ್, 3.61 ಮಿಲಿಯನ್ ಮತ್ತು 3.55 ಮಿಲಿಯನ್ ಸೀಟುಗಳು ಭರ್ತಿಯಾಗಿದ್ದವು ಎಂದು ಅದು ಉಲ್ಲೇಖಿಸಿದೆ.
ದೆಹಲಿ ಏರ್ಪೋರ್ಟ್ ಇಂಟರ್ನ್ಯಾಷನಲ್ ಲಿಮಿಟೆಡ್ (DIAL) ನ ಸಿಇಒ ವಿದೇಹ್ ಕುಮಾರ್ ಜೈಪುರಿಯಾರ್, “ಕೋವಿಡ್ -೧೯ ಇಡೀ ಪ್ರಪಂಚದ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಸತತ ಎರಡು ವರ್ಷಗಳಿಂದ ಪ್ರಯಾಣದ ನಿರ್ಬಂಧಗಳಿಂದಾಗಿ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಇದೀಗ ವ್ಯಾಕ್ಸಿನ್ ಆದ ಜನರ ಅಂತರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.