
ಸಾವು (ಸಾಂಕೇತಿಕ ಚಿತ್ರ)
ಕೊಡಗು: ಎಸ್ಟೇಟ್ ಕಾಮಗಾರಿಯ ವೇಳೆ ವಿದ್ಯುದಾಘಾತಕ್ಕೆ ಕಾರ್ಮಿಕನೋರ್ವ ಮೃತಪಟ್ಟಿದ್ದಾರೆ. ಕೊಡಗಿನಲ್ಲಿ ಈ ಘಟನೆ ವರದಿಯಾಗಿದ್ದು, ನಿರ್ಲಕ್ಷ್ಯ ತೋರಿದ ಎಸ್ಟೇಟ್ ಮಾಲಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪನೀರವರ ತೋಲ ಅಲಿಯಾಸ್ ಮಂಜ (38) ಆರ್ಜಿ ಗ್ರಾಮದಲ್ಲಿನ ಎಸ್ಟೇಟ್ ನ ಲೈನ್ ಮನೆಯ ನಿವಾಸಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಹಾಗೂ ಆತನ ಪತ್ನಿ ಕಾವೇರಿ ಕೆ ಐಯ್ಯಪ್ಪ ಒಡೆತನದ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಮರ ಕತ್ತರಿಸುವ ವೇಳೆ ಅಲ್ಯೂಮಿನಿಯಂ ಏಣಿ ಬಳಕೆ ಮಾಡುತ್ತಿದ್ದರು, ಏಣಿ 11 ಕೆವಿ ಎಲೆಕ್ಟ್ರಿಕ್ ಲೈನ್ ನ್ನು ತಾಗಿದ್ದು ವಿದ್ಯುದಾಘಾತ ಉಂಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಕೂಡಲೇ ವಿರಾಜ್ ಪೇಟೆ ಪೊಲೀಸರು ಧಾವಿಸಿದ್ದು, ಮೃತನ ಪತ್ನಿ ಕಾವೇರಿ ದಾಖಲಿಸಿರುವ ದೂರಿನ ಆಧಾರದಲ್ಲಿ ಎಸ್ಟೇಟ್ ಮಾಲಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೃತನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.