ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದ ಮೂವರನ್ನು ಒಂದೇ ಮುಹೂರ್ತದಲ್ಲಿ ವಿವಾಹವಾದ ಬುಡಕಟ್ಟು ವ್ಯಕ್ತಿ!
ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಅಲಿರಾಜ್ಪುರ ಜಿಲ್ಲೆ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದ್ದು, ಗ್ರಾಮದ ಮಾಜಿ ಸರಪಂಚರೊಬ್ಬರು ಒಂದೇ ಮುಹೂರ್ತದಲ್ಲಿ ವಿವಾಹವಾಗಿದ್ದಾರೆ.
Published: 03rd May 2022 12:28 PM | Last Updated: 03rd May 2022 01:16 PM | A+A A-

ಮದುವೆ ಚಿತ್ರ
ಭೋಪಾಲ್: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಅಲಿರಾಜ್ಪುರ ಜಿಲ್ಲೆ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದ್ದು, ಗ್ರಾಮದ ಮಾಜಿ ಸರಪಂಚರೊಬ್ಬರು ಒಂದೇ ಮುಹೂರ್ತದಲ್ಲಿ ವಿವಾಹವಾಗಿದ್ದಾರೆ.
ನಾನ್ಪುರ್ ಗ್ರಾಮದಲ್ಲಿ 40ರ ಹರೆಯದ ಸಾಮ್ರಾತ್ ಮೌರ್ಯ ಅವರು ನನ್ಬಾಯ್, ಮೇಲಾ ಮತ್ತು ಸಕ್ರಿ ಅವರನ್ನು ವಿವಾಹವಾಗಿದ್ದಾರೆ. ಮದುವೆ ಸಮಾರಂಭದಲ್ಲಿ ನೂರಾರು ಗ್ರಾಮಸ್ಥರು, ಮೌರ್ಯ ಮತ್ತು ಅವರು ವಿವಾದವಾದ ಮೂವರು ಮಹಿಳೆಯರ ಆರು ಮಕ್ಕಳು - ಮೂವರು ಹೆಣ್ಣುಮಕ್ಕಳು ಮತ್ತು ಮೂವರು ಗಂಡು ಮಕ್ಕಳು ಭಾಗವಹಿಸಿದ್ದರು.
ಈ ಸಂಬಂಧಗಳು ಪ್ರಾರಂಭವಾದಾಗ ನನ್ನ ಪರಿಸ್ಥಿತಿ ಚನ್ನಾಗಿರಲಿಲ್ಲ. ಆದ್ದರಿಂದ ಸಂಬಂಧದಿಂದ ಮಕ್ಕಳನ್ನು ಪಡೆದರೂ ನಾನು ಅವರನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ. ಆದರೆ ಈಗ ನಾವು ಅವರನ್ನು ಮದುವೆ ಆಗಿ ಪರಿವರ್ತಿಸುವ ಸ್ಥಿತಿಯಲ್ಲಿದ್ದೇವೆ. ವಿವಾಹವು ಮುಖ್ಯವಾಗಿದೆ ಏಕೆಂದರೆ ಅದು ನಮ್ಮ ಕುಟುಂಬದಲ್ಲಿನ ಎಲ್ಲಾ ಮಂಗಳಕರ ಆಚರಣೆಗಳ ಭಾಗವಾಗಲು ಮತ್ತು ನಮ್ಮ ಕುಲ್ ದೇವಿಯ ದೇವಸ್ಥಾನವನ್ನು ಪ್ರವೇಶಿಸಲು ಅರ್ಹತೆಯನ್ನು ನೀಡುತ್ತದೆ ಮೌರ್ಯ ಹೇಳಿದರು.
ಭಿಲಾಲ ಬುಡಕಟ್ಟಿನ ಹಿರಿಯರಾದ ಪ್ರಕಾಶ್ ಮೌರ್ಯ ಮತ್ತು ಸಜ್ಜನ್ ಸಿಂಗ್ ಮೌರ್ಯ ಅವರು ತಮ್ಮ ಸಂಪ್ರದಾಯದ ಅಡಿಯಲ್ಲಿ ವಿವಾಹಗಳು ಅತ್ಯಗತ್ಯ ಎಂದು ಹೇಳಿದರು. ಏಕೆಂದರೆ ಲಿವ್-ಇನ್ ಜೋಡಿಗಳು ತಮ್ಮ ಸಂಬಂಧಿಕರ ಯಾವುದೇ ಶುಭ ಸಮಾರಂಭಗಳಲ್ಲಿ ಭಾಗವಾಗುವುದಿಲ್ಲ.