ಬಿಜೆಪಿಯ ಒಡೆದು ಆಳುವ ನೀತಿ ಸರಿಯಲ್ಲ; ಮುಸ್ಲಿಮರೇ.. ನೀವು ಹೆದರಬೇಡಿ, ಹೋರಾಟ ಮುಂದೂವರೆಸಿ: ಮಮತಾ
ಈದ್-ಉಲ್-ಫಿತರ್ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ದೇಶದಲ್ಲಿ ಪ್ರಸ್ತುತ ಪರಿಸ್ಥಿತಿಯು ಉತ್ತಮವಾಗಿಲ್ಲ. ಪ್ರತ್ಯೇಕತೆಯ ರಾಜಕೀಯಕ್ಕೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದ್ದಾರೆ.
Published: 03rd May 2022 04:44 PM | Last Updated: 03rd May 2022 05:32 PM | A+A A-

ಮಮತಾ ಬ್ಯಾನರ್ಜಿ
ಕೊಲ್ಕತಾ: ಈದ್-ಉಲ್-ಫಿತರ್ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ದೇಶದಲ್ಲಿ ಪ್ರಸ್ತುತ ಪರಿಸ್ಥಿತಿಯು ಉತ್ತಮವಾಗಿಲ್ಲ. ಪ್ರತ್ಯೇಕತೆಯ ರಾಜಕೀಯಕ್ಕೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದ್ದಾರೆ.
ಈದ್-ಉಲ್-ಫಿತರ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಬ್ಯಾನರ್ಜಿ, ಅಲ್ಲಿ ನೆರೆದಿದ್ದ ಜನರನ್ನು ಭಯಪಡಬೇಡಿ ಆದರೆ ಉತ್ತಮ ಭವಿಷ್ಯದ ದೃಷ್ಟಿಯಿಂದ ಒಂದುಗೂಡುವಂತೆ ಕರೆ ನೀಡಿದರು. ದೇಶದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ, ಒಡೆದು ಆಳುವ ನೀತಿ ಸರಿಯಲ್ಲ, ಭಯಪಡಬೇಡಿ, ಹೋರಾಟ ಮುಂದುವರಿಸಿ ಎಂದು ಹೇಳಿದರು.
ನಾನು ಅಥವಾ ನನ್ನ ಪಕ್ಷ ಅಥವಾ ನನ್ನ ಸರ್ಕಾರವು ನಿಮಗೆ ನೋವನ್ನುಂಟು ಮಾಡುವ ಯಾವುದೇ ಕಾರ್ಯವನ್ನು ಮಾಡುವುದಿಲ್ಲ ಎಂದು ನೆರೆದಿದ್ ಸಾವಿರಗಟ್ಟಲೇ ಜನರಿಗೆ ಭರವಸೆ ನೀಡಿದರು.