ರಾಜ್ ಠಾಕ್ರೆಗೆ ಸಂಕಷ್ಟ ತಂದ ಧ್ವನಿವರ್ಧಕ ವಿವಾದ: ಜಾಮೀನು ರಹಿತ ವಾರೆಂಟ್ ಜಾರಿ, 100 ಮಂದಿಗೆ ನೋಟಿಸ್

ಧ್ವನಿವರ್ಧಕ ವಿಚಾರವಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ಇದೀಗ ಸಂಕಷ್ಟ ಎದುರಾಗಿದ್ದು, ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.

Published: 03rd May 2022 06:17 PM  |   Last Updated: 03rd May 2022 08:06 PM   |  A+A-


Raj thackeray

ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ

PTI

ಮುಂಬೈ: ಧ್ವನಿವರ್ಧಕ ವಿಚಾರವಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ಇದೀಗ ಸಂಕಷ್ಟ ಎದುರಾಗಿದ್ದು, ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.

ಹೌದು.. 14 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಠಾಕ್ರೆ ವಿರುದ್ಧ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೋರ್ಟ್ ಒಂದು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. 2008ರಲ್ಲಿ ರಾಜ್ ಠಾಕ್ರೆ (Raj Thackeray) ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 109 ಮತ್ತು 117ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: ಅಕ್ಷಯ ತೃತೀಯ ದಿನ ಮಹಾ ಆರತಿ ಆಚರಿಸಬೇಡಿ, ಮುಸ್ಲಿಮರು ಈದ್ ಆಚರಿಸಲಿ: ಕಾರ್ಯಕರ್ತರಿಗೆ ರಾಜ್ ಠಾಕ್ರೆ ಕರೆ!

ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಹಲವು ಎಂಎನ್ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಿದ ತಮ್ಮ ಮುಂದೆ ಹಾಜರುಪಡಿಸುವಂತೆ ಮುಂಬಯಿ ಪೊಲೀಸ್ ಆಯುಕ್ತರಿಗೆ ಸಾಂಗ್ಲಿ ಜಿಲ್ಲೆಯ ಶಿರಾಲಾದಲ್ಲಿನ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಸೂಚನೆ ನೀಡಿದ್ದಾರೆ. ರಾಜ್ ಠಾಕ್ರೆ ಅಲ್ಲದೆ, ಎಂಎನ್‌ಎಸ್‌ನ ಮತ್ತೊಬ್ಬ ನಾಯಕ ಶಿರೀಶ್ ಪಾರ್ಕರ್ ವಿರುದ್ಧ ಕೂಡ ಖೇರ್ವಾಡಿ ಪೊಲೀಸ್ ಠಾಣೆಗೆ ವಾರಂಟ್ ಹೊರಡಿಸಲಾಗಿದೆ. ಜೂನ್ 8ರ ಒಳಗೆ ವಾರಂಟ್ ಅನುಷ್ಠಾನಗೊಳ್ಳಬೇಕು ಮತ್ತು ಇಬ್ಬರೂ ನಾಯಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ: ಮಸೀದಿಯಿಂದ ಧ್ವನಿವರ್ಧಕ ತೆರವಿಗೆ ಮೇ 3 ರ ಗಡುವು ವಿಧಿಸಿದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ

ಮತ್ತೊಂದು ಪ್ರಕರಣ ದಾಖಲು
ಪ್ರಚೋದನಾಕಾರಿ ಭಾಷಣದ ಆರೋಪದಲ್ಲಿ ಭಾನುವಾರ ರಾಜ್ ಠಾಕ್ರೆ ವಿರುದ್ಧ ಔರಂಗಾಬಾದ್‌ನಲ್ಲಿ ಪ್ರಕರಣ ದಾಖಲಾಗಿದೆ. ಸಮಾವೇಶ ಆಯೋಜಿಸಿದ್ದ ಮೂವರು ಸಂಘಟಕರನ್ನು ಕೂಡ ಪೊಲೀಸರು ಎಫ್‌ಐಆರ್‌ನಲ್ಲಿ ಹೆಸರಿಸಿದ್ದಾರೆ. ಗಲಭೆಗೆ ಕಾರಣವಾಗುವ ಉದ್ದೇಶದೊಂದಿಗೆ ಪ್ರಚೋದನೆ ನೀಡಿದ್ದು ಮತ್ತು ಸಾರ್ವಜನಿಕರಿಂದ ಅಥವಾ ಹತ್ತಕ್ಕಿಂತ ಹೆಚ್ಚು ಮಂದಿಯಿಂದ ಅಪರಾಧ ಕೃತ್ಯ ನಡೆಸಲು ಪ್ರಚೋದನೆ ಕೊಟ್ಟ ಆರೋಪದಲ್ಲಿ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಯೋಗಿಗಳಿಲ್ಲ; ನಮ್ಮಲ್ಲಿರುವುದು 'ಭೋಗಿಗಳು' ಎಂದು ಯೋಗಿ ಆದಿತ್ಯನಾಥ್ ಹೊಗಳಿದ ರಾಜ್ ಠಾಕ್ರೆ

ಠಾಕ್ರೆ ಹೇಳಿದ್ದೇನು?
ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ಬಳಸುವುದರ ವಿರುದ್ಧ ಸಮರ ಸಾರಿರುವ ರಾಜ್ ಠಾಕ್ರೆ, ಮೇ 3ರ ಒಳಗೆ ಎಲ್ಲ ಮಸೀದಿಗಳಿಂದ ಧ್ವನಿವರ್ಧಕ ತೆರವುಗೊಳಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಗಡುವು ನೀಡಿದ್ದರು. ಈ ಗಡುವು ಮುಗಿದ ಬಳಿಕವೂ ಕ್ರಮ ತೆಗೆದುಕೊಳ್ಳದೆ ಹೋದರೆ ಮುಂದಾಗುವ ಅನಾಹುತಗಳಿಗೆ ತಾವು ಜವಾಬ್ದಾರಿ ಅಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು; ರಾಜ್ ಠಾಕ್ರೆ!! 

ಭದ್ರತಾ ಸಿಬ್ಬಂದಿಗಳ ರಜೆಗೆ ಕೊಕ್ಕೆ
ಮಸೀದಿಗಳಲ್ಲಿ ಅಳವಡಿಸಿರುವ ಲೌಡ್ ಸ್ಪೀಕರ್‌ಗಳನ್ನು ತೆರವುಗೊಳಿಸದೆ ಇದ್ದರೆ, ಮಸೀದಿಗಳ ಮುಂದೆ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸ ಪ್ರಸಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ರಾಜ್ ಠಾಕ್ರೆ ಅವರ ಗಡುವು ಮಂಗಳವಾರಕ್ಕೆ ಅಂತ್ಯಗೊಳ್ಳುತ್ತಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮಹಾರಾಷ್ಟ್ರ ಪೊಲೀಸರಿಗೆ ಕಟ್ಟೆಚ್ಚರ ವಹಿಸುವಂತೆ ಹಾಗೂ ಸಕಲ ಸಿದ್ಧತೆ ನಡೆಸಿರುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿಯೂ ಜಾಗ್ರತೆಯಿಂದ ಇರುವಂತೆ ಸೂಚನೆ ನೀಡಿರುವ ಮಹಾರಾಷ್ಟ್ರ ಪೊಲೀಸ್ ಇಲಾಖೆ, ತನ್ನ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಿದೆ. ರಾಜ್ಯಾದ್ಯಂತ ರಾಜ್ಯ ಮೀಸಲು ಪೊಲೀಸ್ ಪಡೆಯ ೮೭ ತುಕಡಿಗಳು ಮತ್ತು 30,000 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಜ್ ಠಾಕ್ರೆ ಹೇಳಿಕೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅಗತ್ಯ ಬಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಡಿಜಿಪಿ ರಜನೀಶ್ ಸೇತ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕ ವಿವಾದ: ರಾಜ್ ಠಾಕ್ರೆ ಪಕ್ಷಕ್ಕೆ ಮತ್ತೋರ್ವ ಎಂಎನ್ಎಸ್ ಮುಖಂಡ ಗುಡ್ ಬೈ!

ನೋಟಿಸ್ ಜಾರಿ
ಮುಂಬೈ ಪೊಲೀಸರು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡರಾದ ನಿತಿನ್ ಸರ್ದೇಸಾಯಿ ಮತ್ತು ಬಾಲಾ ನಂದಗಾಂವ್ಕರ್ ಸೇರಿದಂತೆ ಕನಿಷ್ಠ 100 ಜನರಿಗೆ ಸಿಆರ್‌ಪಿಸಿಯ ಸೆಕ್ಷನ್ 149 ರ ಅಡಿಯಲ್ಲಿ ಕಾಗ್ನೈಸಬಲ್ ಅಪರಾಧಗಳನ್ನು ತಡೆಗಟ್ಟಲು ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಶಿವಾಜಿ ಪಾರ್ಕ್ ಪೊಲೀಸರು ಎಂಎನ್‌ಎಸ್ ಪದಾಧಿಕಾರಿಗಳಾದ ನಿತಿನ್ ಸರ್ದೇಸಾಯಿ, ಬಾಲ ನಂದಗೌಡರ್, ಸಂದೀಪ್ ದೇಶಪಾಂಡೆ, ಸುಕುಮಾರ್ ಕಿಲ್ಲೇದಾರ್ ಸೇರಿದಂತೆ 12 ಜನರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ದಾದರ್ ಪ್ರದೇಶದಲ್ಲಿ 15 ಜನರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
 


Stay up to date on all the latest ರಾಷ್ಟ್ರೀಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp