ಅಕ್ಷಯ ತೃತೀಯ ದಿನ ಮಹಾ ಆರತಿ ಆಚರಿಸಬೇಡಿ, ಮುಸ್ಲಿಮರು ಈದ್ ಆಚರಿಸಲಿ: ಕಾರ್ಯಕರ್ತರಿಗೆ ರಾಜ್ ಠಾಕ್ರೆ ಕರೆ!
ಅಕ್ಷಯ ತೃತೀಯದ ದಿನದಂದೇ ಈದ್ ಬಂದಿರುವುದರಿಂದ ಮಹಾ ಆರತಿ ಆಚರಿಸಬೇಡಿ ಎಂದು ಕಾರ್ಯಕರ್ತರಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ್ದಾರೆ.
Published: 03rd May 2022 01:22 AM | Last Updated: 03rd May 2022 01:22 AM | A+A A-

ರಾಜ್ ಠಾಕ್ರೆ
ಮುಂಬೈ: ಅಕ್ಷಯ ತೃತೀಯದ ದಿನದಂದೇ ಈದ್ ಬಂದಿರುವುದರಿಂದ ಮಹಾ ಆರತಿ ಆಚರಿಸಬೇಡಿ ಎಂದು ಕಾರ್ಯಕರ್ತರಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ್ದಾರೆ.
ಮುಸ್ಲಿಮ್ ಸಮುದಾಯದವರು ಯಾವುದೇ ಹಿಂಜರಿಕೆ ಇಲ್ಲದೇ ಈದ್ ನ್ನು ಆಚರಿಸಬೇಕು ಆದ್ದರಿಂದ ಅಕ್ಷಯ ತೃತೀಯದ ದಿನದಂದು ಮಹಾ ಆರತಿಯನ್ನು ನಡೆಸಬೇಡಿ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಮಸೀದಿಗಳಲ್ಲಿನ ಧ್ವನಿವರ್ಧಕ ವಿಷಯ ಸಾಮಾಜಿಕ ವಿಷಯವೇ ಹೊರತು ಧಾರ್ಮಿಕ ವಿಷಯವಲ್ಲ. ಮಂಗಳವಾರದಂದು ಮುಸ್ಲಿಂ ಸಮುದಾಯದವರು ಈದ್ ಆಚರಣೆ ಮಾಡುತ್ತಿದ್ದಾರೆ. ಅವರು ಯಾವುದೇ ಹಿಂಜರಿಕೆ ಇಲ್ಲದೇ ಈದ್ ಆಚರಣೆ ಮಾಡಬೇಕು ಎಂದು ಠಾಕ್ರೆ ಹೇಳಿದ್ದಾರೆ.
ಧ್ವನಿವರ್ಧಕಗಳ ವಿಷಯದಲ್ಲಿ ತಮ್ಮ ಮುಂದಿನ ನಡೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸುವುದಾಗಿಯೂ ಇದೇ ವೇಳೆ ರಾಜ್ ಠಾಕ್ರೆ ತಿಳಿಸಿದ್ದಾರೆ.