ಹಣದುಬ್ಬರ ನಿಯಂತ್ರಣಕ್ಕೆ ಯತ್ನ; ರೆಪೊ ದರ 40 ಬಿಪಿಎಸ್, ಶೇ.4.40ಕ್ಕೆ ಹೆಚ್ಚಳ, ತಕ್ಷಣದಿಂದಲೇ ಜಾರಿ: ಆರ್‌ಬಿಐ
ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 4.40ಕ್ಕೆ ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ.
Published: 04th May 2022 03:09 PM | Last Updated: 04th May 2022 03:39 PM | A+A A-

ಆರ್ ಬಿಐ ಅಧ್ಯಕ್ಷ ಶಕ್ತಿಕಾಂತ್ ದಾಸ್
ನವದೆಹಲಿ: ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 4.40ಕ್ಕೆ ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ.
It has been decided to increase Cash Reserve Ratio (CRR) by 50 basis points to 4.5% for net demand & time liabilities effective from the fortnight beginning 21st May 2022. Withdrawal of liquidity through this increase in the CRR would be of the order of Rs 87,000 cr: RBI Governor pic.twitter.com/sdfJ1sShLR
— ANI (@ANI) May 4, 2022
ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಸಿ ರೆಪೊ ದರಗಳನ್ನು 40 ಮೂಲಾಂಶಗಳಷ್ಟು ಹೆಚ್ಚಿಸಲು ಎಂಪಿಸಿ ಸರ್ವಾನುಮತದಿಂದ ಮತ ಹಾಕಿದೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 4.40ಕ್ಕೆ ನಿಗದಿಪಡಿಸಲಾಗಿದೆ. ಜಾಗತಿಕ ಆರ್ಥಿಕ ಅಸ್ಥಿರತೆ ನಡುವೆಯೂ ಭಾರತೀಯ ಆರ್ಥಿಕತೆ ಸ್ಥಿರವಾಗಿದೆ ಎಂದು ಹೇಳಿದರು.
Nine out of the 12 food subgroups registered an increase in inflation in the month of March. High-frequency price indicators for April indicate the persistence of food price pressures: RBI Governor Shaktikanta Das pic.twitter.com/DTjPHAvHd7
— ANI (@ANI) May 4, 2022
ಅಂತೆಯೇ ನಗದು ಮೀಸಲು ಅನುಪಾತವನ್ನು (ಕ್ಯಾಶ್ ರಿಸರ್ವ್ ರೇಷಿಯೊ) ಬೇಡಿಕೆಯ 50 ಮೂಲಾಂಶ ಹೆಚ್ಚಿಸಲಾಗಿದ್ದು, ಶೇ 4.5ಕ್ಕೆ ನಿಗದಿಪಡಿಸಲಾಗಿದೆ. ಇದು 2022ರ ಮೇ 21ರಿಂದ ಜಾರಿಗೆ ಬರಲಿದೆ ಎಂದೂ ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿ ವೇಳೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವರದಿಯನ್ನು ಉಲ್ಲೇಖಿಸಿದ ಶಕ್ತಿಕಾಂತ್ ದಾಸ್ ಅವರು, ಯುದ್ಧದ ಆರ್ಥಿಕ ಪರಿಣಾಮಗಳು ಎಲ್ಲ ಕಡೆ ಹರಡುತ್ತಿವೆ. ಸರಕು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಕೊರತೆ ಹಾಗೂ ಚಂಚಲತೆ ಹೆಚ್ಚಾಗುತ್ತಿದೆ. ವಿವೇಕಯುತ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಭಾರತವು ಸದ್ಯ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದೆ ಎಂದು ಹೇಳಿದರು.
MPC votes unannimously to increase policy repo rates by 40 bps with immediate effect: RBI Governor Shaktikanta Das pic.twitter.com/JWM6ZwKTo3
— ANI (@ANI) May 4, 2022
ಅಲ್ಲದೆ 12 ಆಹಾರ ಉಪಗುಂಪುಗಳಲ್ಲಿ 9 ಸಮೂಹ ಸಂಸ್ಥೆಗಳು ಮಾರ್ಚ್ ತಿಂಗಳಲ್ಲಿ ಹಣದುಬ್ಬರದಲ್ಲಿ ಹೆಚ್ಚಳವನ್ನು ದಾಖಲಿಸಿದೆ. ಏಪ್ರಿಲ್‌ನ ಬೆಲೆ ಏರಿಕ ಸೂಚಕಗಳು ಆಹಾರದ ಬೆಲೆ ಒತ್ತಡದ ನಿರಂತರತೆಯನ್ನು ಸೂಚಿಸುತ್ತಿವೆ. 21ನೇ ಮೇ 2022 ರಿಂದ ಹದಿನೈದು ದಿನಗಳಿಂದ ಜಾರಿಯಾಗುವ ನಿವ್ವಳ ಬೇಡಿಕೆ ಮತ್ತು ಸಮಯದ ಹೊಣೆಗಾರಿಕೆಗಳಿಗಾಗಿ ನಗದು ಮೀಸಲು ಅನುಪಾತವನ್ನು (CRR) 50 ಬೇಸಿಸ್ ಪಾಯಿಂಟ್‌ಗಳಿಂದ 4.5% ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. CRR ನಲ್ಲಿನ ಈ ಹೆಚ್ಚಳದ ಮೂಲಕ ನಗದು ಹಿಂತೆಗೆದುಕೊಳ್ಳುವಿಕೆಯು ರೂ. 87,000 ಕೋಟಿ ರೂ ಆಗಿದೆ ಎಂದು ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದರು.