ಅಜಯ್ ದೇವಗನ್ ನಟನೆಯ 'ರನ್ ವೇ 34' ವಿರುದ್ಧ ಭಾರತೀಯ ಪೈಲಟ್ ಗಳ ಒಕ್ಕೂಟ ಪ್ರತಿಭಟನೆ
ಹಿಂದಿ ರಾಷ್ಟ್ರ ಭಾಷೆ ವಿವಾದ ಹಿನ್ನೆಲೆಯಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ರನ್ ವೇ 34' ವಿರುದ್ಧ ಭಾರತೀಯ ಪೈಲಟ್ ಗಳ ಒಕ್ಕೂಟ ಪ್ರತಿಭಟನೆಗೆ ಇಳಿದಿದೆ.
Published: 04th May 2022 05:04 PM | Last Updated: 04th May 2022 05:09 PM | A+A A-

ರನ್ ವೇ 34 ಸಿನಿಮಾದಲ್ಲಿ ಅಜಯ್ ದೇವಗನ್
ನವದೆಹಲಿ: ಹಿಂದಿ ರಾಷ್ಟ್ರ ಭಾಷೆ ವಿವಾದ ಹಿನ್ನೆಲೆಯಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ರನ್ ವೇ 34' ವಿರುದ್ಧ ಭಾರತೀಯ ಪೈಲಟ್ ಗಳ ಒಕ್ಕೂಟ ಪ್ರತಿಭಟನೆಗೆ ಇಳಿದಿದೆ. ಸಿನಿಮಾದಲ್ಲಿ ಪೈಲಟ್ ಗಳ ಬಗ್ಗೆ ಅವಾಸ್ತವಿಕವಾಗಿ ಮತ್ತು ವಿಮಾನ ಪ್ರಯಾಣಿಕರ ಮನದಲ್ಲಿ ಭೀತಿ ಹುಟ್ಟಿಸುವಂತೆ ತೋರಿಸಲಾಗಿದೆ ಎಂದು ಆರೋಪವಿದೆ.
ಅಜಯ್ ದೇವಗನ್ ಅವರೇ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅವರು ಪೈಲಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾಕ್ ಪಿಟ್ ನಲ್ಲಿ ಧೂಮಪಾನ ಮಾಡ್ತಾರೆ. ಕ್ಲಬ್ ನಲ್ಲಿ ಕುಡಿಯುತ್ತಾರೆ. ಈ ಸಿನಿಮಾ ಪೈಲಟ್ ಗಳನ್ನು ಪ್ರತಿನಿಧಿಸುವುದಿಲ್ಲ, ವಿಮಾನಯಾನ ಉದ್ಯಮ ವಿಕೃತ ನಡವಳಿಕೆ ಮತ್ತು ಮಾದಕ ವ್ಯಸನಿ ಕಡೆಗೆ ಶೂನ್ಯ ಸಹಿಷ್ಣುತೆ ಹೊಂದಿರುವುದಾಗಿ ಭಾರತೀಯ ಪೈಲಟ್ ಗಳ ಒಕ್ಕೂಟ ಹೇಳಿದೆ.
ಇದನ್ನೂ ಓದಿ: ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಸಂವಿಧಾನದಲ್ಲಿ ಎಲ್ಲೂ ಬರೆದಿಲ್ಲ: ಗಾಯಕ ಸೋನು ನಿಗಮ್
ತಮ್ಮ ಒಕ್ಕೂಟದಲ್ಲಿ ಸುಮಾರು 5,000 ಪೈಲಟ್ ಗಳು ಸದಸ್ಯರಾಗಿದ್ದಾರೆ. ಸಿನಿಮಾದಲ್ಲಿ ಪೈಲಟ್ ವೃತ್ತಿ ಅವಾಸ್ತವಿಕ ಎಂಬಂತೆ ತೋರಿಸಲಾಗಿದೆ. ಪ್ರತಿದಿನ ಸಾವಿರಾರು ವಿಮಾನಗಳನ್ನು ಜವಾಬ್ದಾರಿಯುತವಾಗಿ, ಸುರಕ್ಷಿತವಾಗಿ ವಿಮಾನ ಹಾರಾಟ ಕಾರ್ಯ ನಿರ್ವಹಿಸುತ್ತಿದ್ದು, ಥ್ರಿಲ್ಲಿಂಗ್ ರೋಮಾಂಚಕ ಕಥೆಯನ್ನು ಅಸಾಮಾನ್ಯ ವೃತ್ತಿಪರತೆಯ ನಿಜವಾದ ಚಿತ್ರಣವೆಂದು ಗ್ರಹಿಸಬಾರದು ಎಂದು ಒಕ್ಕೂಟ ಹೇಳಿದೆ.
ಏಪ್ರಿಲ್ 29 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾದ ಈ ಸಿನಿಮಾ 2015 ರ ನೈಜ ಘಟನೆ ಆಧರಿತ ಎಂದು ಹೇಳಲಾಗಿದೆ. ಅಮಿತಾಬ್ ಬಚ್ಚನ್, ರಾಕುಲ್ ಪ್ರೀತ್ ಸಿಂಗ್, ಬೊಮನ್ ಇರಾನಿ, ಅಂಗೀರ ಧಾರ್, ಆಕಾಂಕ್ಷಾ ಸಿಂಗ್ ಮತ್ತು ಕ್ಯಾರಿಮಿನಾಟಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.