ಹೈದ್ರಾಬಾದ್: ಚಾಕುವಿನಿಂದ ಇರಿದು ಯುವಕನ ಕಗ್ಗೊಲೆ, ಮರ್ಯಾದಾ ಹತ್ಯೆಯ ಶಂಕೆ
ಬೈಕ್ ನಲ್ಲಿ ಬಂದ ದುಷ್ಕರ್ಮಿಯೊಬ್ಬ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿರುವ ಘಟನೆ ಹೈದ್ರಾಬಾದ್ ನ ಸರೂರ್ ನಗರ ತಹಸೀಲ್ದಾರ್ ಕಚೇರಿ ಬಳಿ ನಡೆದಿದೆ. ಇದನ್ನು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ.
Published: 05th May 2022 11:53 AM | Last Updated: 05th May 2022 11:53 AM | A+A A-

ಮೃತ ನಾಗರಾಜ್ (ಬಲಕ್ಕೆ) ಹಾಗೂ ಆತನ ಹೆಂಡತಿ ಚಿತ್ರ
ಹೈದರಾಬಾದ್: ಬೈಕ್ ನಲ್ಲಿ ಬಂದ ದುಷ್ಕರ್ಮಿಯೊಬ್ಬ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿರುವ ಘಟನೆ ಹೈದ್ರಾಬಾದ್ ನ ಸರೂರ್ ನಗರ ತಹಸೀಲ್ದಾರ್ ಕಚೇರಿ ಬಳಿ ನಡೆದಿದೆ. ಇದನ್ನು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ.
ಮೃತನನ್ನು ಬಿಲ್ಲಪುರಂ ನಾಗರಾಜ್ ಎಂದು ಗುರುತಿಸಲಾಗಿದೆ. ಈತ ಸಿಕಂದರಾಬಾದಿನ ಮರೆದ್ಲಲ್ಲಿ ನಿವಾಸಿ. ಓಲ್ಡ್ ಸಿಟಿಯ ಮಲಕ್ ಪೇಟೆಯಲ್ಲಿರುವ ಜನಪ್ರಿಯ ಕಾರ್ ಶೋ ರೂಂನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ಶಂಕಿತರನ್ನು ಬಂಧಿಸಲಾಗಿತ್ತು. ಅವರೆಲ್ಲರೂ ಈತ ಮದುವೆಯಾಗಿದ್ದ ಹುಡುಗಿಯ ಕುಟುಂಬಕ್ಕೆ ಸೇರಿದವರು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ನಾಗರಾಜ್ ಜನವರಿ ತಿಂಗಳಿನಲ್ಲಿ ಸೈಯದ್ ಅಶ್ರಿನ್ ಸುಲ್ತಾನಾ ಎಂಬ ಹುಡುಗಿಯನ್ನು ಹಳೆ ನಗರದ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದರು. ಕಾಲೇಜು ದಿನಗಳಿಂದಲೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಬೇರೆ ಬೇರೆ ಧರ್ಮದವರಾಗಿದ್ದರಿಂದ ಆಕೆಯ ಮನೆಯವರು ಕೊಂದಿದ್ದಾರೆ ಎಂದು ನಾಗರಾಜನ ಸಂಬಂಧಿಕರೊಬ್ಬರು ಆರೋಪಿಸಿದ್ದಾರೆ.
ನಾಗರಾಜ್ ಅವರ ಸಂಬಂಧಿಕರು ಪ್ರತಿಭಟನೆ ನಡೆಸಿದ್ದು, ಘಟನೆಯ ಪ್ರದೇಶದಲ್ಲಿ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗಿತ್ತು. ಕೊಲೆ ಹಿಂದೆ ಅವರ ಪತ್ನಿಯ ಕುಟುಂಬದ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಹತ್ಯೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಬಂಧಿಸಬೇಕು ಮತ್ತು ಈ ಹತ್ಯೆಯ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಒತ್ತಾಯಿಸಿದ್ದಾರೆ.