
ನವಜೋತ್ ಸಿಂಗ್ ಸಿಧು
ನವದೆಹಲಿ: ನವಜೋತ್ ಸಿಂಗ್ ಸಿಧು ವಿರುದ್ಧ ಕ್ರಮ ಕೈಗೊಳ್ಳಲು ಪಂಜಾಬ್ ಕಾಂಗ್ರೆಸ್ ಶಿಸ್ತು ಸಮಿತಿಯು ಮೇ 6 ರಂದು ಸಭೆ ಸೇರಲಿದೆ.
ಪಕ್ಷದ ಹಿರಿಯ ನಾಯಕ ಎ.ಕೆ.ಆಂಟನಿ ನೇತೃತ್ವದ ಶಿಸ್ತು ಸಮಿತಿಯು ಸಿದು ವಿರುದ್ಧ ನೋಟಿಸ್ ಜಾರಿಗೊಳಿಸಿ ಅವರ ಪ್ರತಿಕ್ರಿಯೆಯನ್ನು ಕೇಳುವ ನಿರೀಕ್ಷೆಯಿದೆ. ಕಳೆದ ವಾರ, ಆಂಟನಿ ಕೇರಳಕ್ಕೆ ತೆರಳಿದ್ದರು. ಶಿಸ್ತು ಸಮಿತಿ ನಿರ್ಧಾರದ ನಂತರ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ತೊರೆದು ವಾಪಸ್ ತವರು ಪಕ್ಷ ಎಎಪಿಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ,.
ಕಾಲವೇ ಉತ್ತರ ಹೇಳಲಿದೆ..! ನಾನು ಉತ್ತರಿಸುವ ಅಧಿಕಾರವನ್ನು ‘ಸಮಯ’ಕ್ಕೆ ನೀಡಿದ್ದೇನೆ..! ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದು ಟ್ವೀಟ್ ಮಾಡಿದ್ದರು.
ಹರೀಶ್ ಚೌಧರಿ ಅವರ ನೋಟಿಸ್ ಕೈಗೆ ಸಿಕ್ಕ ಮರು ದಿನ, ಸಿಧು ಮಾಡಿರುವ ಟ್ವೀಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಟ್ವೀಟ್ನಲ್ಲಿ ಸಿಧು ಯಾವುದೇ ಕಾರಣ, ಹಿನ್ನೆಲೆ ವಿವರಿಸದಿದ್ದರೂ ಕೂಡಾ, ಇದು ಹರೀಶ್ ಚೌಧರಿ ಅವರ ನೋಟಿಸ್ಗೆ ಉತ್ತರ ಎಂಬಂತೆ ಭಾಸವಾಗುತ್ತಿದೆ. ಸಿಧು ವಿರುದ್ಧ ಹರೀಶ್ ಚೌಧರಿ ಕ್ರಮಕ್ಕೆ ಮುಂದಾಗಿದ್ದು, ಇದಕ್ಕೆ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರ ಅನುಮತಿ ಕೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸೇರಲ್ಲ ಎಂದ 'ಹಳೆಯ ಸ್ನೇಹಿತ' ಪ್ರಶಾಂತ್ ಕಿಶೋರ್ ಭೇಟಿಯಾದ ಸಿಧು!
ಹರೀಶ್ ಅವರ ನೋಟಿಸ್ ಹೊರಬಿದ್ದ ಬಳಿಕ ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ಸಿಧು, ‘ನಾನು ಯಾವತ್ತೂ ನನ್ನ ವಿರುದ್ಧದ ಟೀಕೆಗಳನ್ನು ಶಾಂತವಾಗಿ ಕೇಳುತ್ತೇನೆ. ಉತ್ತರ ಕೊಡಬೇಕಾದ ಅಧಿಕಾರವನ್ನು ನಾನು ಸಮಯಕ್ಕೆ ನೀಡುತ್ತೇನೆ’ ಎಂದು ಹೇಳಿದ್ದಾರೆ.
ಸಿಧು ಅವರ ‘ಸದ್ಯದ ಚಟುವಟಿಕೆ’ಗಳ ಮೇಲೆ ನಿಗಾ ಇಟ್ಟಿರುವ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ಚೌಧರಿ, ಈ ಹಿಂದೆ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರವನ್ನು ಸಿಧು ನಿರಂತರವಾಗಿ ಟೀಕಿಸುತ್ತಲೇ ಇದ್ದಾರೆ ಎಂದು ಕಿಡಿಕಾರಿದ್ಧಾರೆ.
ಈ ನಡುವೆ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ನೇಮಕ ಮಾಡಿದ ಬಳಿಕ, ಕಾಂಗ್ರೆಸ್ನಿಂದ ಉಚ್ಛಾಟಿಸಲಾದ ಹಲವು ನಾಯಕರ ಜೊತೆಗೆ ಸಿಧು ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಚಟುವಟಿಕೆಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ..! ಪಕ್ಷದಿಂದ ಉಚ್ಛಾಟಿಸಲಾದ ಶಾಸಕ ಸುರ್ಜಿತ್ ಸಿಂಗ್ ಧಿಮನ್, ಕೇವಲ್ ಧಿಲ್ಲೋನ್ರನ್ನು ಸಿಧು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಿಧು ಅವರ ಟ್ವೀಟ್ ಒಂದರಲ್ಲಿ, ಫರೀದ್ಕೋಟ್ ಜಿಲ್ಲೆಯ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು.