ದೆಹಲಿ ಸಿಎಂ ಕೇಜ್ರಿವಾಲ್'ಗೆ ಬೆದರಿಕೆ ಆರೋಪ: ಪಂಜಾಬ್'ನಲ್ಲಿ ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ ಬಂಧನ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕಿದ ಆರೋಪ ಸಂಬಂಧ ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
Published: 06th May 2022 11:12 AM | Last Updated: 06th May 2022 01:26 PM | A+A A-

ತಜಿಂದರ್ ಪಾಲ್ ಸಿಂಗ್ ಬಗ್ಗಾ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕಿದ ಆರೋಪ ಸಂಬಂಧ ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಮಾರ್ಚ್ 3ರಂದು ನಡೆದ ಪ್ರತಿಭಟನೆಯ ವೇಳೆ ತಜಿಂದರ್ ಸಿಂಗ್ ಅವರು ಅರವಿಂದ್ ಕೇಜ್ರಿವಾಲ್ಗೆ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ತಜಿಂದರ್ ಮಾತನಾಡಿರುವ ಹೇಳಿಕೆ ಮತ್ತು ವೀಡಿಯೊ ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಕೋಮು ಪ್ರಚೋದಕ ಹೇಳಿಕೆ ನೀಡಿದ್ದಕ್ಕಾಗಿ ತಜೀಂದರ್ ಬಗ್ಗಾರನ್ನು ಬಂಧಿಸಲಾಗಿದೆ: ಪಂಜಾಬ್ ಪೊಲೀಸ್ ಸ್ಪಷ್ಟನೆ
ತಜೀಂದರ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಅವರಿಗೆ ತುರ್ಬಾನ್ ಧರಿಸಲು ಕೂಡ ಅನುಮತಿಸಿಲ್ಲ. ಕೇಜ್ರಿವಾಲ್ ಅವರ ಹಿಟ್ಲರ್ ರೀತಿಯ ಈ ಕೃತ್ಯ ಅವರಿಗೆ ನಷ್ಟವನ್ನು ತರಲಿದೆ. ಕೇಜ್ರಿವಾಲ್ ನಿರ್ದೇಶನದ ಮೇರೆಗೆ ಪಂಜಾಬ್ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆಂದು ದೆಹಲಿ ಬಿಜೆಪಿ ನಾಯಕ ಆದೇಶ್ ಗುಪ್ತಾ ಅವರು ಹೇಳಿದ್ದಾರೆ.