ಕೋಮು ಪ್ರಚೋದಕ ಹೇಳಿಕೆ ನೀಡಿದ್ದಕ್ಕಾಗಿ ತಜೀಂದರ್ ಬಗ್ಗಾ ಬಂಧಿಸಲಾಗಿದೆ: ಪಂಜಾಬ್ ಪೊಲೀಸ್ ಸ್ಪಷ್ಟನೆ

ಕೋಮು ಪ್ರಚೋದಕ ಹೇಳಿಕೆಗಳು, ಧಾರ್ಮಿಕ ದ್ವೇಷ ಉತ್ತೇಜಿಸುವ ಭಾಷಣ ಮತ್ತು ಬೆದರಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ದೆಹಲಿಯ ಅವರ ನಿವಾಸದಿಂದ ಶುಕ್ರವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

Published: 06th May 2022 01:25 PM  |   Last Updated: 06th May 2022 01:39 PM   |  A+A-


BJP leader Tajinder Pal Singh Bagga

ತಜೀಂದರ್ ಪಾಲ್ ಸಿಂಗ್ ಬಗ್ಗಾ

ANI

ನವದೆಹಲಿ: ಕೋಮು ಪ್ರಚೋದಕ ಹೇಳಿಕೆಗಳು, ಧಾರ್ಮಿಕ ದ್ವೇಷ ಉತ್ತೇಜಿಸುವ ಭಾಷಣ ಮತ್ತು ಬೆದರಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ದೆಹಲಿಯ ಅವರ ನಿವಾಸದಿಂದ ಶುಕ್ರವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

ವಿಚಾರಣೆಗೆ ಬರುವಂತೆ ಈ ಹಿಂದೆ ಬಗ್ಗಾ ಅವರಿಗೆ ಐದು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಉದ್ದೇಶ ಪೂರ್ವಕವಾಗಿಯೇ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕಾನೂನು ಪ್ರಕ್ರಿಯೆಗಳ ಪೂರ್ಣಗೊಳಿಸಿ ಇಂದು ಬೆಳಿಗ್ಗೆ ನವದೆಹಲಿಯ ಜನಕಪುರಿಯಲ್ಲಿದ್ದ ಅವರ ನಿವಾಸದಿಂದಲೇ ಅವರನ್ನು ಬಂಧನಕ್ಕೊಳಪಡಿಸಿ, ಪಂಜಾಬ್'ನ ಸಹಿಬ್ಜಾದಾ ಅಜಿತ್ ಸಿಂಗ್ ನಗರಕ್ಕೆ ಕರೆತರಲಾಯಿತು. ಶೀಘ್ರದಲ್ಲೇ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮತ್ತು ಕೋಮು ಪ್ರಚೋದಕ ಹೇಳಿಕೆಗಳನ್ನು ಪ್ರಕಟಿಸುವ ಮೂಲಕ ಪ್ರಚೋದನೆ, ಕ್ರಿಮಿನಲ್ ಬೆದರಿಕೆ ಮತ್ತು ಹಿಂಸೆಯನ್ನು ಉಂಟುಮಾಡುವ ಕುರಿತು ಮೇ.1ರಂದೇ ಬಗ್ಗಾ ಅವರ ವಿರುದ್ಧ ಪಂಜಾಬ್ ರಾಜ್ಯ ಅಪರಾಧ ವಿಭಾಗದಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ 5 ಬಾರಿ ನೋಟಿಸ್ ನೀಡಿದ್ದರೂ, ಯಾವುದೇ ಪ್ರತಿಕ್ರಿಯೆಗಳನ್ನೂ ನೀಡಿರಲಿಲ್ಲ. ಉದ್ದೇಶಪೂರ್ವಕವಾಗಿಯೇ ವಿಚಾರಣೆ ಹಾಜರಾಗದಿರುವುದು ಇದರಿಂದ ಖಚಿತವಾಗಿತ್ತು. ಎಸ್ಐಟಿ ಅಧಿಕಾರಿಗಳು ಪ್ರಕರಣದ ವಿಚಾರಣೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ದೆಹಲಿ ಸಿಎಂ ಕೇಜ್ರಿವಾಲ್'ಗೆ ಬೆದರಿಕೆ ಆರೋಪ: ಪಂಜಾಬ್'ನಲ್ಲಿ ಬಿಜೆಪಿ ಮುಖಂಡನ ಬಂಧನ

ಪೊಲೀಸರು ನನ್ನ ಮುಖಕ್ಕೆ ಹೊಡೆದಿದ್ದರು: ತಜೀಂದರ್ ಬಗ್ಗಾ ತಂದೆ ಆರೋಪ
ಬಗ್ಗಾ ಅವರ ತಂದೆ ಮಾತನಾಡಿ, ಪೊಲೀಸರು ಪುತ್ರನನ್ನು ಬಂಧನಕ್ಕೊಳಪಡಿಸುವ ವೇಳೆ ವಿಡಿಯೋ ಮಾಡಲು ಆರಂಭಿಸಿದಾಗ ನನ್ನ ಮುಖಕ್ಕೆ ಹೊಡೆದಿದ್ದರು ಎಂದು ಹೇಳಿದ್ದಾರೆ.

ಬೆಳಿಗ್ಗೆ 10-15 ಮಂದಿ ಪೊಲೀಸ್ ಸಿಬ್ಬಂದಿಗಳು ನನ್ನ ಮನೆಗೆ ಬಂದಿದ್ದರು. ಬಳಿಕ ಪುತ್ರನನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದರು. ಈ ವೇಳೆ ಫೋನ್ ತೆಗೆದುಕೊಂಡು ವಿಡಿಯೋ ಮಾಡಲು ನಾನು ಆರಂಭಿಸಿದ್ದೆ. ಬಳಿಕ ಮತ್ತೊಂದು ರೂಮಿಗೆ ನನ್ನನ್ನು ಕರೆದುಕೊಂಡು ಹೋದ ಪೊಲೀಸರು ಮುಖಕ್ಕೆ ಹೊಡೆದಿದ್ದರು ಎಂದು ಹೇಳಿದ್ದಾರೆ.

ಪಂಜಾಬ್ ಪೊಲೀಸರ ವಿರುದ್ಧ ದೆಹಲಿಯಲ್ಲಿ ಎಫ್ಐಆರ್ ದಾಖಲು
ತಜೀಂದರ್ ಬಂಧನ ಬೆನ್ನಲ್ಲೇ ದೆಹಲಿ ಹಾಗೂ ಪಂಜಾಬ್ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ಶುರುವಾಗಿದೆ.

ತಜೀಂದರ್ ಬಂಧನ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಪಂಜಾಬ್ ಪೊಲೀಸರ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ತಜೀಂದರ್ ಅವರನ್ನು ಬಂದನಕ್ಕೊಳಪಡಿಸಿ ಪಂಜಾಬ್ ರಾಜ್ಯಕ್ಕೆ ಕರೆದೊಯ್ಯುವ ವೇಳೆ ಹರಿಯಾಣದಲ್ಲಿ ಪಂಜಾಬ್ ಪೊಲೀಸರಿಗೆ ಪ್ರತಿರೋಧ ವ್ಯಕ್ತವಾಗಿತ್ತು ಎಂದು ವರದಿಗಳು ತಿಳಿಸಿವೆ.


Stay up to date on all the latest ದೇಶ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp