ಹನುಮಾನ್ ಚಾಲೀಸಾ ಪಠಿಸ್ತೀವಿ ಅಂದಿದ್ದ ರಾಣಾ ದಂಪತಿಗೆ ಜಾಮೀನು; ಬ್ರಿಟಿಷ್ ರಾಜ್ ಇದಕ್ಕಿಂತ ಉತ್ತಮ: ಸಂಜಯ್ ರಾವತ್
ಸಂಸದೆ ನವನೀತ್ ರಾಣಾ ಮತ್ತು ಅವರ ಶಾಸಕ ಪತಿ ರವಿ ರಾಣಾ ದಂಪತಿಗೆ ಜಾಮೀನು ದೊರೆತ ನಂತರ ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತೊಮ್ಮೆ ಪರಿಹಾರ ಹಗರಣ(ರಿಲೀಫ್ ಸ್ಕ್ಯಾಮ್) ಆರೋಪ ಮಾಡಿದ್ದಾರೆ.
Published: 06th May 2022 08:22 PM | Last Updated: 07th May 2022 02:45 PM | A+A A-

ಸಂಜಯ್ ರಾವತ್
ಮುಂಬೈ: ಸಂಸದೆ ನವನೀತ್ ರಾಣಾ ಮತ್ತು ಅವರ ಶಾಸಕ ಪತಿ ರವಿ ರಾಣಾ ದಂಪತಿಗೆ ಜಾಮೀನು ದೊರೆತ ನಂತರ ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತೊಮ್ಮೆ ಪರಿಹಾರ ಹಗರಣ(ರಿಲೀಫ್ ಸ್ಕ್ಯಾಮ್) ಆರೋಪ ಮಾಡಿದ್ದಾರೆ.
ಜಾಮೀನು ನೀಡುವಾಗ, ಎಫ್ಐಆರ್ನಲ್ಲಿ ದಂಪತಿಗಳ ವಿರುದ್ಧ ದೇಶದ್ರೋಹದ ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಾಲಯವು ಪ್ರಶ್ನೆಗಳನ್ನು ಎತ್ತಿತು. ಬಳಿಕ ರಾವತ್ ಈ ಹೇಳಿಕೆಗಳನ್ನು ಪರಿಹಾರ ಹಗರಣ ಎಂದು ಕರೆದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ ಸಂಸದ, ಕೇಂದ್ರವನ್ನು ನೋಡಿದರೆ ಬ್ರಿಟಿಷರ ಆಡಳಿತವೇ ಉತ್ತಮವಾಗಿದೆ ಎಂದು ಅನಿಸುತ್ತಿದೆ. ದೇಶದಲ್ಲಿ ಪರಿಹಾರ ಹಗರಣ ನಡೆಯುತ್ತಿದ್ದು, ಅದರಲ್ಲಿ ಹಲವು ಅಂಶಗಳಿವೆ. ಅಪರಾಧಗಳು ಮತ್ತು ಆರೋಪಗಳು ನಮ್ಮ ವಿರುದ್ಧ ಮಾತ್ರ ಸಾಬೀತಾಗುತ್ತಿವೆ, ಆದರೆ ಇತರರ ವಿರುದ್ಧ ಇದೇ ರೀತಿಯ ಆರೋಪಗಳು ಏಕೆ ಸಾಬೀತಾಗುತ್ತಿಲ್ಲ? ಎಂದು ಪ್ರಶ್ನೆ ಮಾಡಿದರು.
ಮುಂಬೈ ವಿಶೇಷ ನ್ಯಾಯಾಧೀಶ ಆರ್ಎನ್ ರೋಕಡೆ ಅವರು ರಾಣಾ ದಂಪತಿಗೆ ಜಾಮೀನು ನೀಡುವಾಗ ಬುಧವಾರ, ಐಪಿಸಿಯ ಸೆಕ್ಷನ್ 124ಎ ಅಡಿಯಲ್ಲಿ ದೇಶದ್ರೋಹದ ಪ್ರಕರಣವನ್ನು ಉಲ್ಲಂಘಿಸಿಲ್ಲ ಎಂದು ಮೇಲ್ನೋಟಕ್ಕೆ ತೋರುತ್ತಿದೆ. ಸಂಸದ-ಶಾಸಕ ದಂಪತಿಗಳು ಸಂವಿಧಾನದಲ್ಲಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯನ್ನು ನಿಸ್ಸಂದೇಹವಾಗಿ ದಾಟಿದ್ದಾರೆ, ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಕೇವಲ ಅವಹೇಳನಕಾರಿ ಅಥವಾ ಆಕ್ಷೇಪಾರ್ಹ ಪದಗಳ ಅವರ ವಿರುದ್ಧ ದೇಶದ್ರೋಹದ ಆರೋಪಕ್ಕೆ ಸಾಕಷ್ಟು ಆಧಾರವಾಗುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ: ಹನುಮಾನ್ ಚಾಲೀಸಾ ವಿವಾದ: ಮುಂಬೈ ಜೈಲಿನಿಂದ ಸಂಸದೆ ನವನೀತ್ ರಾಣಾ ಬಿಡುಗಡೆ
ರಾಣಾ ದಂಪತಿಯನ್ನು ಮುಂಬೈನ ಖಾರ್ ಪೊಲೀಸರು ಏಪ್ರಿಲ್ 23 ರಂದು ಬಂಧಿಸಿದ್ದರು. ಎರಡು ಕೋಮುಗಳ ನಡುವೆ ದ್ವೇಷವನ್ನು ಹರಡಿದ್ದಕ್ಕಾಗಿ ಅವರ ವಿರುದ್ಧ ಐಪಿಸಿಯ ಸೆಕ್ಷನ್ 124 ಎ ಮತ್ತು 153 ಎ ಅಡಿಯಲ್ಲಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿತ್ತು. ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ನಿವಾಸವಾದ ಮಾತೋಶ್ರೀ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ದಂಪತಿಗಳು ಘೋಷಿಸಿದ್ದರು. ಇದು ಆಡಳಿತ ಪಕ್ಷದ ಕಾರ್ಯಕರ್ತರನ್ನು ಕೆರಳಿಸಿತ್ತು. ಆದರೆ, ಇದಾದ ನಂತರ ರಾಣಾ ದಂಪತಿ ತಮ್ಮ ಪ್ಲಾನ್ ಅನ್ನು ಮುಂದೂಡಿದ್ದರು. ರಾಣಾ ದಂಪತಿ ಗುರುವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಕಳೆದ ತಿಂಗಳು ಶಿವಸೇನೆ ನಾಯಕ ರಾವತ್ ಕೂಡ 'ಪರಿಹಾರ ಹಗರಣ' ಆರೋಪ ಮಾಡಿದ್ದರು. ಆ ವೇಳೆ, ವಿಕ್ರಾಂತ್ ಯುದ್ಧನೌಕೆ ಸಂರಕ್ಷಣೆಗೆ ಹಣ ಸಂಗ್ರಹಿಸುವ ವಿಚಾರದಲ್ಲಿ ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ಅವರಿಗೆ ಬಾಂಬೆ ಹೈಕೋರ್ಟ್ ಪರಿಹಾರ ನೀಡಿರುವ ಕುರಿತು ಪ್ರತಿಕ್ರಿಯಿಸಿದ್ದರು.